ಬಂಟ್ವಾಳ, ಸೆ 13 (DaijiworldNews/SM): ಶಂಕಿತ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಉದ್ಯಮಿಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಸೆಪ್ಟೆಂಬರ್ 13ರ ಶುಕ್ರವಾರ ನಡೆದಿದೆ. ಸಪ್ತವೆಂಚರ್ಸ್ ಸಂಸ್ಥೆಯ ಪಾಲುದಾರ ಪ್ರಶಾಂತ್ ಸರಳಾಯ ಮೃತ ಉದ್ಯಮಿ.
ಕೆಲವು ದಿನಗಳಿಂದ ಇವರು ಜ್ವರದಿಂದ ಬಳಲುತ್ತಿದ್ದರು. ಇವರಿಗೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಜ್ವರ ಉಲ್ಭಣಿಸಿದ ಹಿನ್ನೆಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ನಿರಂತರ ಚಿಕಿತ್ಸೆ ನೀಡಿದ ಬಳಿಕವೂ ಇಂದು ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತ: ಪುತ್ತೂರು ತಾಲೂಕಿನ ದೇಲಂಪಾಡಿಯವರಾದ ಇವರು ಸದ್ಯ ಬಂಟ್ವಾಳ ತಾಲೂಕಿನ ಪೇರಮೊಗರು ಬಳಿ ವಾಸಿಸುತಿದ್ದರು. ಮೃತರು ತಂದೆ ,ತಾಯಿ ,ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮೃದು ಬಾಷಿಯಾಗಿದ್ದ ಇವರು ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದರು. ಪುತ್ತೂರು ಜೇಸಿಯ ಸಕ್ರಿಯ ಸದಸ್ಯರಾಗಿದ್ದರು.ಹಲವು ವರ್ಷಗಳ ಕಾಲ ಖಾಸಗಿ ಸಂಸ್ಥೆಯಲ್ಲಿ ಅಕೌಂಟೆಂಟ್ಆಗಿ ದುಡಿದ ಬಳಿಕ ಅವರು ಸಪ್ತ ವೆಂಚರ್ಸ್ ಸಂಸ್ಥೆಯಲ್ಲಿ ಪಾಲುದಾರರಾಗಿದ್ದರು.