ಮಂಗಳೂರು, ಸೆ.17 (DaijiworldNews/AK): ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ 76ನೇ ಜನ್ಮದಿನದ ಅಂಗವಾಗಿ ಮಂಗಳೂರಿನ ಬಿಕರ್ನಕಟ್ಟೆ ಚರ್ಚ್ನಲ್ಲಿ ಕ್ರೈಸ್ತ ಬಾಂಧವರ ಉಪಸ್ಥಿತಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ 76ನೇ ಜನ್ಮದಿನದ ಸಂಕೇತವಾಗಿ 76 ಕ್ಯಾಂಡಲ್ಗಳನ್ನು ಬೆಳಗಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಉತ್ತಮ ಆಯುರಾರೋಗ್ಯ, ದೀರ್ಘಾಯುಷ್ಯ, ಶಕ್ತಿ ಹಾಗೂ ಮಾರ್ಗದರ್ಶನ ದೊರೆಯಲಿ ಎಂದು ವಿಶೇಷವಾಗಿ ಪ್ರಾರ್ಥಿಸಲಾಯಿತು.
ದೇಶದ ಅಭಿವೃದ್ಧಿ, ಜನಕಲ್ಯಾಣ ಹಾಗೂ ರಾಷ್ಟ್ರ ನಿರ್ಮಾಣದ ಕಾರ್ಯಗಳನ್ನು ಇನ್ನಷ್ಟು ಸಮರ್ಪಣೆಯಿಂದ ಮುನ್ನಡೆಸಲು ಅವರಿಗೆ ಭಗವಂತನ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥನೆಯಲ್ಲಿ ಹಾರೈಸಲಾಯಿತು.
ಈ ಸಂದರ್ಭದಲ್ಲಿ ಜೆಸಲ್ ಡಿಸೋಜಾ, ಗ್ಲೆನ್ ವಿಶಾಲ್ ಡಿಸಿಲ್ವಾ, ಜೋಯ್ಸನ್ ಡಿಸೋಜಾ, ಟೀನಾ ಪಿರೇರಾ, ಉದಯ್ ಡಿಸೋಜಾ, ಅಜಿತ್ ಡಿಸಿಲ್ವಾ, ಸುನೀಲ್ ರೊಡ್ರಿಗಸ್ ಹಾಗೂ ರೋಶನ್ ರೆನೊಲ್ಡ್ ಸೇರಿದಂತೆ ಹಲವಾರು ಗಣ್ಯರು ಹಾಗೂ ಕ್ರೈಸ್ತ ಬಾಂಧವರು ಉಪಸ್ಥಿತರಿದ್ದರು.