ಉಡುಪಿ, ಸೆ 14 (Daijiworld News/RD): ಸಂಬಂಧಿಯ ಮನೆಗೆ ಕನ್ನ ಹಾಕಿ 22 ಲಕ್ಷ ನಗದು ಹಾಗೂ ಬೆಳ್ಳಿಯ ವಸ್ತುಗಳನ್ನು ಎಗರಿಸಿದ ಘಟನೆ ಗುರುವಾರ ಉಡುಪಿಯ ಒಳಕಾಡುವಿನ ಹರಿಶ್ಚಂದ್ರ ಮಾರ್ಗದಲ್ಲಿ ನಡೆದಿದ್ದು, ಇದೀಗ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಸಾಂಗ್ಲಿ ಮೂಲದ ಅತುಲ್ ಮಹದೇವ್ ಬಾಂಗ್ನೆ (24) ಮತ್ತು ಸಂದೀಪ್ ಚಂದ್ರಕಾಂತ್ ಶಿಂಧೆ (25) ಎಂದು ಗುರುತಿಸಲಾಗಿದೆ. ಆರೋಪಿಗಳಲ್ಲಿ ಅತುಲ್ ಮಹಾದೇವ್ ಬಾಂಗ್ನೆಯನ್ನು ಗೋವಾದಲ್ಲಿ ಬಂಧಿಸಿದ್ದು, ಸಂದೀಪ್ ಚಂದ್ರಕಾಂತ್ ಶಿಂಧೆಯನ್ನು ಬೈಂದೂರಿನಲ್ಲಿ ಸೆರೆಹಿಡಿಯಲಾಗಿದೆ.
ಇವರು, ಮಾಣಿಕ್ಯ ಪಾಟೀಲ್ ಮನೆಯಲ್ಲಿ ಕಳ್ಳತನ ನಡೆದಿದ್ದು ಸೆ. 12 ರ ಗುರುವಾರ ಪತ್ನಿ ಸುನಂದ ಅವರು ಮಕ್ಕಳಿಗೆ ಮಕ್ಕಳಿಗೆ ಟಿಫಿನ್ ಕೊಡಲೆಂದು ಮಧ್ಯಾಹ 12:15ರ ಸುಮಾರಿಗೆ ಮನೆಗೆ ಬೀಗ ಹಾಕಿ ತೆರಳಿದ್ದರು. ಮನೆಗೆ 1 ಗಂಟೆ ಸುಮಾರಿಗೆ ವಾಪಾಸಾಗಿದ್ದು, ಈ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳರು ಮನೆ ಬಾಗಿಲು ಮುರಿದು ಪ್ರವೇಶಿದ್ದು ಅಡುಗೆ ಮನೆಯ ಪಾತ್ರೆ ಚೆಲ್ಲಾಪಿಲ್ಲಿಯಾಗಿತ್ತು. ಮಾತ್ರವಲ್ಲದೆ ಅಡುಗೆ ಮನೆಯ ಡಬ್ಬಗಳಲ್ಲಿದ್ದ ನಗದು ಮತ್ತು ಅರ್ಧ ಕೆಜಿ ಬೆಳ್ಳಿಯನ್ನು ಕಳ್ಳತನ ಮಾಡಿದ್ದರು.
ಕಳವುಗೈದ 22 ಲಕ್ಷ ರೂಪಾಯಿಯಲ್ಲಿ 15 ಸಾವಿರವನ್ನು ಖರ್ಚು ಮಾಡಿದ್ದಾರೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ. ಇದರ ಜೊತೆಗೆ ಕಳವು ಮಾಡಿದ್ದ ಅರ್ಧ ಕೆಜಿ ಬೆಳ್ಳಿಯನ್ನು ಕೂಡಾ ವಶಪಡಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿ 24 ಘಂಟೆಯ ಒಳಗೆ ಭೇಧಿಸಿದ್ದಕ್ಕಾಗಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರು ಪತ್ತೆ ತಂಡಕ್ಕೆ ನಗದು ಪಾರಿತೋಷಕವನ್ನು ನೀಡಿ ಗೌರವಿಸಿರುತ್ತಾರೆ.