ಕುಂದಾಪುರ, ಸೆ.26 (DaijiworldNews/AK):ಸೆಪ್ಟೆಂಬರ್ 26 ರ ಶನಿವಾರ ಬೆಳಿಗ್ಗೆ ಎಂ ಕೋಡಿ ಕಡಲತೀರದಲ್ಲಿ ಬೂತಾಯಿ ಮೀನು ರಾಶಿ ರಾಶಿಯಾಗಿ ದಡಕ್ಕೆ ಬಂದಿದ್ದು ಮೀನುಗಳನ್ನ ಹಿಡಿಯಲು ನೂರಾರು ಜನರು ಕಡಲತೀರಕ್ಕೆ ಆಗಮಿಸಿದರು.

ಸಮುದ್ರದ ಅಲೆಗಳ ಜೊತೆಗೆ ದಡಕ್ಕೆ ಬಂದ ಬೂತಾಯಿ ಗಳನ್ನು ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸೇರಿದಂತೆ ನೂರಾರು ಜನರು ಧಾವಿಸಿದರು. ಜನರು ಕೈಚೀಲಗಳು ಮತ್ತು ಬಕೆಟ್ಗಳು ಸೇರಿದಂತೆ ವಿವಿಧ ವಸ್ತುಗಳನ್ನು ಬಳಸಿ ಮೀನುಗಳನ್ನು ಸಂಗ್ರಹಿಸುತ್ತಿರುವುದು ಕಂಡುಬಂತು.