ಬಂಟ್ವಾಳ, ಸೆ 16 (Daijiworld News/RD): ಜಿಲ್ಲಾ ಎಸ್.ಪಿ.ಕಚೇರಿ ಮಂಗಳೂರಿನಿಂದ ಪುತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಪ್ರಸ್ತಾವ ಇದೆ. ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿಗಳಿಗೆ ಬಂಟ್ವಾಳವೇ ಕೇಂದ್ರ ಸ್ಥಾನವಾಗಿರುವುದರಿಂದ ಬಂಟ್ವಾಳಕ್ಕೆ ಎಸ್ಪಿ ಕಚೇರಿಯನ್ನು ಸ್ಥಳಾಂತರಿಸಲಿ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಬಿ.ಸಿ.ರೋಡ್ ನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್ಪಿ ಅವರ ಕಚೇರಿ ಪೂತ್ತೂರಿಗೆ ಸ್ಥಳಾಂತರಿಸುವ ಬಗ್ಗೆ ಚರ್ಚೆಯಾಗುತ್ತಿವೆ. ಹಾಗಾಗಿ ಬಂಟ್ವಾಳದಲ್ಲಿ ಎಸ್ಪಿ ಕಚೇರಿಯಾಗಲಿ. ಅಲ್ಲದೆ ಬೆಳ್ತಂಗಡಿ, ಪುತ್ತೂರು, ಸುಳ್ಯ ತಾಲೂಕಿಗಳಿಗೆ ಬಂಟ್ವಾಳವೇ ಕೇಂದ್ರ ಸ್ಥಾನವಾಗಿದ್ದು, ಇದರಿಂದ ಸಾಕಷ್ಟು ಜನರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಇನ್ನು ನೂತನ ಮೋಟಾರು ವಾಹನ ಕಾಯ್ದೆಯಿಂದ ಜನಸಾಮಾನ್ಯರ ಮೇಲೆ ಪ್ರಭಾವ ಬೀರಿದೆ. ದುಪ್ಪಟ್ಟು ದಂಡವಸೂಲಾತಿಯಿಂದ ಬಡವರ್ಗದ ಜನರಿಗೆ ಹೊರೆಯಾಗಿದೆ. ವಾಹನ ತಪಾಸಣೆ ಪರಿಶೀಲನೆ ಕಾರ್ಯಕ್ರಮ ಪರಿಣಾಮಕಾರಿಯಾಗಿ ಮಾಡಲಿ, ಆದರೆ ದುಬಾರಿ ದಂಡದ ಕ್ರಮ ಸರಿಯಲ್ಲ, ಇದರ ಸರಳೀಕರಣ ಆಗಬೇಕು ಎಂದು ಆಗ್ರಹಿಸಿದರು.
ಇನ್ನು ಒಂದೇ ದೇಶ ಒಂದೇ ಭಾಷೆ ಘೋಷಣೆಯಡಿ ಕೇಂದ್ರ ಸರಕಾರವು, ಈಗಾಗಲೇ ಪ್ರಾಥಮಿಕ ಶಾಲಾ ಮಟ್ಟದಲ್ಲಿ ಹಿಂದಿ ಕಲಿಯವುದು ಅನಿವಾರ್ಯವಿರುದರಿಂದ ಸ್ಥಳೀಯ ಭಾಷೆಗಳು ನಶಿಸಿ ಹೋಗಿವೆ. ಇದೇ ರೀತಿ ಮುಂದುರಿದರೆ ರಾಜ್ಯದ ಕನ್ನಡ ಭಾಷೆಯು ಉಳಿಯುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್, ಸುದೀಪ್ ಕುಮಾರ್ ಮಾಣಿ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಎಪಿಎಂಸಿ ಅಧ್ಯಕ್ಷ ಪದ್ಮನಾಭ ರೈ, ಬುಡಾ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ, ಭೂ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್ ಭಾಗವಹಿಸಿದ್ದರು.