ಮಂಗಳೂರು ಸೆ 18 (Daijiworld News/MSP): ನವ ಮಂಗಳೂರು ಬಂದರಿಗೆ ವಿದೇಶಗಳಿಂದ ತೈಲ ನೌಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ಅದರಿಂದ ಕಡಲಿಗೆ ತೈಲ ಸೋರಿಕೆಯಾದರೆ ತಕ್ಷಣ ನಿರ್ವಹಣೆಗೆ ಸದಾ ಸಿದ್ಧರಾಗಿರಬೇಕು.ತೈಲ ಸೋರಿಕೆ ದೊಡ್ಡ ವಿಪತ್ತಾಗಿದ್ದು, ಈ ಬಗ್ಗೆ ಸಾಕಷ್ಟು ಶಾಸನಗಳಿದ್ದರೂ ಮಾಹಿತಿ ಇಲ್ಲದೆಇರುವುದರಿಂದ ತುರ್ತು ಸಂದರ್ಭದಲ್ಲಿ ಸಾಕಷ್ಟು ಸಮಸ್ಯೆಯಾಗಬಹುದಾದ ಸಾಧ್ಯತೆಗಳಿವೆ ಎಂದು ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಸೂಚಿಸಿದ್ದಾರೆ.
ಅವರು ಮಂಗಳವಾರ ಪಣಂಬೂರಿನ ಕೋಸ್ಟ್ ಗಾರ್ಡ್ ಕಚೇರಿಯಲ್ಲಿ ಮಾಲಿನ್ಯ ನಿಯಂತ್ರಣ ಕುರಿತು ರಾಜ್ಯ ಮಟ್ಟದ ಎರಡು ದಿನಗಳ ವಿಚಾರ ಸಂಖ್ಯೆಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ತೈಲ ಸೋರಿಕೆ ವಿಪತ್ತು ನಿರ್ವಹಣಾ ಯೋಜನೆಯ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ಸಮುದ್ರದ ಮಧ್ಯೆ ಬೋಟುಗಳು ಮುಳುಗುತ್ತಿರುವ ಪ್ರಕರಣ ಜಿಲ್ಲೆಯಲ್ಲಿ ವರದಿಯಾಗುತ್ತಿವೆ ಇಂತಹ ಪ್ರಕರಣಗಳನ್ನು ಕಾನೂನುಬದ್ಧವಾಗಿ ನಿರ್ವಹಿಸಲು ನಿಯಮ ಜಾರಿಗೆ ತರಬೇಕಾದ ಅಗತ್ಯವಿದೆ ಎಂದರು.
ಸಮುದ್ರದಲ್ಲಿ ಸೋರಿಕೆಯಂತಹ ಸಂದರ್ಭ ಮೂರು ಹಂತಗಳಲ್ಲಿ ನಿರ್ವಹಿಸಲಾಗುತ್ತದೆ ಎಂದರು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ವಿಜಯಕುಮಾರ ಸೋರಿಕೆ ವಿಪತ್ತು ನಿರ್ವಹಣೆ ಪುಸ್ತಕದ ಮಾಹಿತಿ ನೀಡಿದರು.ಈ ಸಂದರ್ಭ ಕೋಸ್ಟ್ ಗಾರ್ಡ್ ಉಪಕಮಾಂಡೆಂಟ್ ರಾಜಕುಮಾರ್ ಉಪಸ್ಥಿತರಿದ್ದರು.