ಬೆಂಗಳೂರು ಡಿ 29: ನಿಗೂಢವಾಗಿ ಸಾವನಪ್ಪಿದ ಡಿ.ಕೆ.ರವಿ ಅವರ ತಾಯಿ ರಾಜಕೀಯ ಪ್ರವೇಶಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಕೋಲಾರದಿಂದಲೇ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರು ತಮ್ಮನ್ನು ಇತ್ತೀಚೆಗೆ ಭೇಟಿ ಮಾಡಿದ ರೈತ ಮುಖಂಡರಿಗೆ ಈ ವಿಷಯದ ಕುರಿತು ತಿಳಿಸಿದ್ದಾರೆ.
ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ತಾನು ಸ್ಪರ್ಧಿಸುವ ಇಚ್ಚೆ ಹೊಂದಿದ್ದು, ನಾನು ಕೂಡಾ ನನ್ನ ಮಗನಂತೆ ಜನತೆಯ ಸೇವೆ ಮಾಡಬೇಕು ಇದಕ್ಕಾಗಿ ಅವಕಾಶ ಕೊಟ್ಟು ಬೆಂಬಲ ನೀಡಿ ಎಂದಿದ್ದಾರೆ. ಸರ್ಕಾರದ ಉನ್ನತ ಹುದ್ದೆಯಲ್ಲಿದ್ದ ಮಗನನ್ನು ಕಳೆದುಕೊಂಡಿದ್ದ ಗೌರಮ್ಮ ಸಾವಿನ ನ್ಯಾಯಕ್ಕಾಗಿ ಎಲ್ಲಾ ಪಕ್ಷಗಳ ನಾಯಕರು, ಸರ್ಕಾರದ ಪ್ರಮುಖರ ಮನೆ ಗೆ ಅಲೆದಿದ್ದದು.ಅದರೂ ನ್ಯಾಯ ಸಿಗಲಿಲ್ಲ ಎನ್ನುವ ಅಸಮಾಧಾನ ವ್ಯಕ್ತಪಡಿಸಿ ಇದೀಗ ರಾಜಕೀಯಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ ಎನ್ನುವುದು ಸದ್ಯದ ಮಾಹಿತಿ.