ಕಾಸರಗೋಡು, ಸೆ 19 (Daijiworld News/MSP): ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಕೇಂದ್ರ ಸರಕಾರದ ನಿರ್ಲಕ್ಷ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅನಾಸ್ಥೆಯನ್ನು ಪ್ರತಿಭಟಿಸಿ ಕಾಸರಗೋಡು ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ೨೪ ಗಂಟೆಗಳ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ.
ನಾಳೆ ( ಸೆ. 20 ) ರ ಬೆಳಿಗ್ಗೆ 9ರಿಂದ 21 ರ ಬೆಳಿಗ್ಗೆ 9 ಗಂಟೆ ತನಕ ಸತ್ಯಾಗ್ರಹ ನಡೆಸುವರು. ಕಾಸರಗೋಡು ಹೊಸಬಸ್ಸು ನಿಲ್ದಾಣ ಪರಿಸರದ ಲ್ಲಿ ನಡೆಸುವ ಸತ್ಯಾಗ್ರಹವನ್ನು ಮುಸ್ಲಿಂ ಲೀಗ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪಿ .ಕೆ ಕುಞಲಿ ಕುಟ್ಟಿ ಉದ್ಘಾಟಿಸುವರು.
21ರಂದು ಬೆಳಿಗ್ಗೆ 9 ಗಂಟೆಗೆ ಸತ್ಯಾಗ್ರಹದ ಸಮಾಪನ ವನ್ನು ಕೇರಳ ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಉದ್ಘಾಟಿಸುವರು. ತಲಪಾಡಿ - ಕಾಸರಗೋಡು , ನೀಲೇಶ್ವರ - ಕಾಲಿಕಡವು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಹದೆಗೆಟ್ಟಿದ್ದು , ದುರಸ್ತಿ ಬಗ್ಗೆ ಅಧಿಕಾರಿಗಳು ಭರವಸೆ ನೀಡುತ್ತಿದ್ದರೂ ಇನ್ನೂ ಕಾಮಗಾರಿ ಆರಂಭಿಸಿಲ್ಲ . ಕೇಂದ್ರ ಸರಕಾರ ಕಾಸರಗೋಡಿನ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಮೌನ ವಹಿಸಿದೆ. ಪ್ರತಿ ಮಳೆಗಾಲದಲ್ಲಿ ರಸ್ತೆ ಹೊಂಡಮಯವಾಗುತ್ತಿದ್ದು , ಬಳಿಕ ತೇಪೆ ಹಚ್ಚಲಾಗುತ್ತಿದೆ. ಶಾಶ್ವತ ರಸ್ತೆ ದುರಸ್ತಿಗೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಂಸದರು ಆರೋಪಿಸಿದ್ದು , ಕೂಡಲೇ ದುರಸ್ತಿ ನಡೆಸದೆ ಇದ್ದಲ್ಲಿ ಅಮರಣಾಂತ ಉಪವಾಸ ನಡೆಸುವುದಾಗಿ ಮುನ್ನೆಚ್ಚರಿಕೆ ನೀಡಿದ್ದಾರೆ