ಹೆಬ್ರಿ, ಸೆ 20(DaijiworldNews/SM): ಪತ್ರಿಕೆಯ ಸಂಪಾದಕನೆಂಬ ಅಹಂನಲ್ಲಿ ಬೆಕಾಬಿಟ್ಟಿ ಸುದ್ದಿಗಳನ್ನ ಪ್ರಕಟಿಸುತ್ತಿದ್ದ ಪತ್ರಿಕೆಯೊಂದರ ಕಾರ್ಯನಿರ್ವಾಹಕ ಸಂಪಾದಕನ ಮೇಲೆ ಪ್ರಕರಣ ದಾಖಲಾಗಿದೆ. ಅಮ್ಮ ರವಿ ಮಾನಹಾನಿ ಸುದ್ದಿಗಳನ್ನ ಪ್ರಕಟಿಸುತ್ತಿದ್ದ ಸಂಪಾದಕರಾಗಿದ್ದು, ರವಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇತ್ತೀಚೆಗೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಗ್ಯಾಂಗ್ ಕಟ್ಟಿಕೊಂಡು ಬಂದ ಅಮ್ಮರವಿ, ಹೆಬ್ರಿಯ ಹಳೆ ಚಾಮ್ಸ್ ಫ್ಯಾಕ್ಟರಿ ಬಳಿ ನಡೆದುಕೊಂಡು ಹೋಗುತ್ತಿದ್ದ ಪುಷ್ಪರಾಜ್ ಎಂಬವರನ್ನು ಅಡ್ಡಗಟ್ಟಿ ಸುಳ್ಳು ಸುದ್ದಿ ಪ್ರಕಟಿಸಬಾರದೆಂದಾದ್ರೆ ಒಂದು ಲಕ್ಷ ನೀಡಬೇಕು ಎಂಬ ಹಣದ ಬೇಡಿಕೆ ಇಟ್ಟಿದ್ದಾನೆ ಎಂಬ ಆರೋಪ ಅಮ್ಮ ರವಿ ಮೇಲಿದೆ.
ಅಲ್ಲದೆ ನೀನು ನಿನ್ನ ಕುಟುಂಬದವರು ನೀಚ ಜಾತಿಗೆ ಸೇರಿದವರು ಎಂದು ಜಾತಿ ನಿಂದನೆ ಮಾಡಿದ್ದಾನೆ. ಜೊತೆಗೆ ಇತ್ತೀಚೆಗೆ ನನ್ನ ಪ್ರಭಾವದಿಂದ ನಿನ್ನ ಮೇಲೆ ಒಂದು ಹುಡುಗಿಯ ಕೇಸ್ ಮಾಡಿ ಈ ಹಿಂದೆ ನನ್ನ ಹಾಯ್ ಕರಾವಳಿ ಪತ್ರಿಕೆಯಲ್ಲಿ ಸುದ್ದಿ ಪ್ರಕಟಿಸಿದ್ದೇನೆ. ನನಗೆ ಹಣ ನೀಡದಿದ್ದಲ್ಲಿ ಮತ್ತೆ ಸುದ್ದಿ ಹಾಕುತ್ತೇನೆ ಎಂದು ಬೆದರಿಕೆ ಕೂಡ ಹಾಕಿದ್ದಾನೆ ಎಂಬುವುದು ಅಮ್ಮ ರವಿ ಮೇಲೆ ಇರುವ ಆರೋಪವಾಗಿದೆ.
ಈ ರೀತಿ ಬೆದರಿಕೆ ಹಾಕಿದ್ದ ಈತ ಹೆಬ್ರಿಯ ಸರ್ಕಲ್ ನಲ್ಲಿ ಪತ್ರಿಕೆ ಹಂಚುತ್ತಿದ್ದ ವೇಳೆ ಪುಷ್ಪರಾಜನಿಗೂ ಸಹ ಒತ್ತಾಯದಿಂದ ಪತ್ರಿಕೆ ನೀಡಿ ಜೀವ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಎಸ್ಸಿಎಸ್ಟಿ ಆಕ್ಟ್ ಅಡಿಯಲ್ಲಿ ಮಾನಹಾನಿ, ಜೀವ ಬೆದರಿಕೆ ಪ್ರಕರಣ ದಾಖಲಾಗಿದೆ.