ಉಪ್ಪಿನಂಗಡಿ, ಸೆ 21 (Daijiworld News/RD): ಎಸ್ ಡಿ ಪಿ ಐ ನೇತೃತ್ವದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ದೇಶದ ಸೈನಿಕರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿ, ಸೈನಿಕರ ಮತ್ತು ಸೈನ್ಯದ ವ್ಯವಸ್ಥೆಯನ್ನು ಅವಮಾನಿಸಿ ದೇಶದ್ರೋಹದ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ ಎಸ್ ಡಿ ಪಿಐ ಜಿಲ್ಲಾ ಕಾರ್ಯದರ್ಶಿ ಜಾಬಿರ್ ಅರಿಯಡ್ಕ, ಸಿದ್ಧಿಕ್ ಮತ್ತು ಪ್ರತಿಭಟನೆ ಆಯೋಜಿಸಿದ ಮುಖಂಡರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.
ಪುತ್ತೂರು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಬಳಿ ಎಸ್ ಡಿ ಪಿಐ ನೇತೃತ್ವದ ಪ್ರತಿಭಟನೆ ನಡೆದಿದ್ದು, ಅದರಲ್ಲಿ ಎಸ್ ಡಿ ಪಿ ಐ ಮುಖಂಡ ಜಾಬೀರ್ ಅರಿಯಡ್ಕ ಅವರು, ಭಾರತೀಯ ಸೈನಿಕರು ಕಾಸ್ಮೀರದಲ್ಲಿ ಮುಸ್ಲೀಂಮರನ್ನು ಆಪಲ್ ಗಿಡದಂತೆ ಕತ್ತರಿರಿಸುತ್ತಿದ್ದಾರೆ. ಸೈನಿಕರ ಮನಸ್ಸಿನಲ್ಲಿ ಮತ್ತು ಅವರ ಹೃದಯದಲ್ಲಿ ಕೋಮು ಭಾವನೆ ಇದೆ. ಅವರು ಆರ್. ಎಸ್ ಎಸ್ ನಂತಹ ಇನ್ನಿತರ ಸಂಘದಿಂದ ಬಂದವರು ಎಂಬುದಾಗಿ ಭಾರತೀಯ ಸೈನಿಕರ ವಿರುದ್ದ ಮಾತನಾಡಿ ಅವಮಾನ ಮಾಡಿದ್ದಾರೆ.
ಈ ಬಗ್ಗೆ ವಿಹಿಂಪ, ಬಜರಂಗದಳದ ಉಪ್ಪಿನಂಗಡಿ ಘಟಕಗಳು ಈ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.