ಉಪ್ಪಿನಂಗಡಿ, ಸೆ 21 (Daijiworld News/RD): ಟಾರ್ ಅನ್ನು ಹೊತ್ತೂಯ್ಯುವ ಟ್ಯಾಂಕರ್ನಲ್ಲಿ ಚಾಲಕನ ಶವ ಪತ್ತೆಯಾದ ಘಟನೆ ಶುಕ್ರವಾರ ಶಿರಾಡಿ ಘಾಟಿಯ ಕೆಂಪು ಹೊಳೆಯಲ್ಲಿ ನಡೆದಿದ್ದು, ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.
ಮೃತನನ್ನು ತಮಿಳುನಾಡು ರಾಜ್ಯದ ತಿರುಚ್ಚಿಯ ನಟರಾಜ್ ಎಂಬವರ ಪುತ್ರ ನಾಗರಾಜ್ (37) ಎಂದು ಗುರುತಿಸಲಾಗಿದೆ.
ಮುಂಜಾನೆ 11ರ ಸುಮಾರಿಗೆ ಮಾರನಹಳ್ಳಿ ಕೆಂಪುಹೊಳೆಯಿಂದ 10 ಕಿ.ಮೀ. ದೂರದಲ್ಲಿ ಹೊಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್ ನಿಂತಿರುವುದನ್ನು ಗಮನಿಸಿದ ಅದೇ ಕಂಪೆನಿಯ ಇನ್ನೋರ್ವ ಚಾಲಕ ಟ್ಯಾಂಕರ್ ಬಳಿ ಚಾಲಕನನ್ನು ಮಾತನಾಡಿಸಲು ತೆರಳಿದಾಗ ಟ್ಯಾಂಕರ್ನಲ್ಲಿ ಚಾಲಕ ಕಂಡಿರಲಿಲ್ಲ. ಟ್ಯಾಂಕರ್ ಸುತ್ತ ಹುಡುಕಾಡಿದಾಗ ಟ್ಯಾಂಕರ್ನ ಮೇಲ್ಭಾಗದ ಮುಚ್ಚಳ ತೆಗೆದುಕೊಂಡಿದ್ದು ಕಂಡಿದ್ದು, ಒಳಗಡೆ ಗಮನಿಸಿದಾಗ ಆತನ ಶವ ಪತ್ತೆಯಾಗಿರುವುದನ್ನು ಗಮನಿಸಿ ಆತ ಸಕಲೇಶಪುರ ಠಾಣೆಗೆ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಾಗಿದೆ.