ಮಂಗಳೂರು, ಸೆ 21 (Daijiworld News/RD): ಕರಾವಳಿ ಸಂಗೀತ ಕಲಾವಿದರ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಇದರ 12 ನೇ ವಾರ್ಷಿಕೋತ್ಸವದ ಅಂಗವಾಗಿ ‘ಸ್ವರ ಕುಡ್ಲ ಸೀಸನ್- 2’ ಧ್ವನಿ ಪರೀಕ್ಷೆ ಕಾರ್ಯಕ್ರಮವು ನಗರದ ಡಾನ್ ಬಾಸ್ಕೋ ಆಡಿಟೋರಿಯಮ್ನಲ್ಲಿ ಇತ್ತೀಚಿಗೆ ಜರುಗಿತು.
ನೂತನ ಪ್ರತಿಭೆಗಳನ್ನು ಗುರುತಿಸುವ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಖ್ಯಾತ ಇಂಜಿನಿಯರ್ ಹಾಗೂ ಸ್ಮಾರ್ಟ್ ಸಿಟಿ ಪ್ರಧಾನ ವ್ಯವಸ್ಥಾಪಕರಾದ ಅರುಣ್ ಪ್ರಭಾ ನೆರವೇರಿಸಿದರು. ಮುಖ್ಯ ಅತಿಥಿ ಮಂಗಳ ಮ್ಯೂಸಿಕ್ ಕ್ಲಬ್ ಸ್ಥಾಪಕ ವಿಮಲ್ ಕೀರ್ತಿ ಜೈನ್ ಉಪಸ್ಥಿತರಿದ್ದರು.
ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ ಪ್ರಸ್ತಾವಿಸಿದರು. ನಿಕಟಪೂರ್ವ ಅಧ್ಯಕ್ಷ ಜಗದೀಶ್ ಶೆಟ್ಟಿ, ಮುರಳೀಧರ ಕಾಮತ್, ಮಲ್ಲಿಕಾ ಶೆಟ್ಟಿ , ನವಗಿರಿ ಗಣೇಶ್ , ದಾಮೋದರ್ ಭಾಗವತ್ ಉಪಾಧ್ಯಕ್ಷರಾದ ವಿದ್ಯಾ ಕಾಮತ್, ಕೋಶಾಧಿಕಾರಿ ಐವನ್ ರಿಚರ್ಡ್ ಡಿ ಸೋಜ, ಪಧಾದಿಕಾರಿಗಳಾದ ರಂಜನ್ ದಾಸ್, ಶರತ್ ಉಚ್ಚಿಲ, ಸುಭಾಶಿತ್, ವಿದ್ಯಾಸುವರ್ಣ, ಗುರುಪ್ರಿಯ ನಾಯಕ್, ದಿನಕರ್, ಧನುರಾಜ್, ಸಂತೋಷ್ ಅಂಚನ್, ಸುರೇಶ್ ಶೆಟ್ಟಿ, ಸಂಚಾಲಕರಾದ ಮೋಹನ್ ಪ್ರಸಾದ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಪ್ರಸಿದ್ಧ ಕಲಾವಿದರಾದ ಶ್ರೀನಿವಾಸ ಭಾಗವತ್, ದಿನೇಶ್ ಕಿನ್ನಿಗೋಳಿ ಹಾಗೂ ಪ್ರಕಾಶ್ ಮಹಾದೇವನ್ ಭಾಗವಹಿಸಿದರು. ಸಂಘಟನಾ ಕಾರ್ಯದರ್ಶಿ ಕೃಷ್ಣ ಪ್ರಸಾದ್ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ರಮೇಶ್ ಸಾಲ್ಯಾನ್ ವಂದಿಸಿದರು.