ಮಂಗಳೂರು, ಸೆ 22 (DaijiworldNews/SM): ಬಿಜೆಪಿ ಸರಕಾರ ಕೂಡ ಒಂದು ರೀತಿಯಲ್ಲಿ ಸಮ್ಮಿಶ್ರ ಸರಕಾರ ಎನ್ನುವ ಮೂಲಕ ವಿಧಾನಪರಿಷತ್ ನ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್ ಗೊಂದಲದ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಸಮ್ಮಿಶ್ರ ಸರಕಾರ ಆಡಳಿತಕ್ಕೆ ಬಂದ್ರೆ, ಅಧಿಕಾರ ಉಳಿಸಿಕೊಳ್ಳುವತ್ತಲೇ ಗಮನ ಹರಿಸುತ್ತದೆ. ಈ ಹಿಂದಿನ ಸಮ್ಮಿಶ್ರ ಸರಕಾರ ಕೂಡ ಅದನ್ನೇ ಮಾಡಿತ್ತು. ಈಗ ಇರುವ ಬಿಜೆಪಿ ಸರಕಾರ ಕೂಡ ಅದನ್ನೇ ಮಾಡುತ್ತಿದೆ ಎಂದಿದ್ದಾರೆ.
ಇನ್ನು ಬಿಜೆಪಿ ಸರಕಾರಕ್ಕೆ ಅಧಿಕಾರ ಉಳಿಸಿಕೊಳ್ಳಲು ಉಪ ಚುನಾವಣೆಯಲ್ಲಿ ಕನಿಷ್ಠ 10 ಸ್ಥಾನಗಳ ಅಗತ್ಯವಿದೆ. ಅದರ ಮೇಲೆ ಸರಕಾರ ಗಮನ ಹರಿಸುತ್ತಿದೆ. ಇದರ ಜತೆಗೆ ಜನರ ಸಮಸ್ಯೆಗಳೂ ಕೂಡ ಪರಿಹಾರವಾಗಬೇಕೆಂದರು.