ಕುಂದಾಪುರ ಡಿ 31 : ಹಾರಾಡೋ ಬಾನಾಡಿಗಳಿಗೆ ಸಮುದ್ರದ ತಂಗಾಯಾಳಿಯ ಸಾಥ್, ಬೀಚ್ ಸವಾರಿಗೆ ಎಟಿವಿ ಬೈಕ್, ದೋಣಿ ವಿಹಾರ, ಬಗೆ ಬಗೆಯ ಮೀನು ಖಾದ್ಯ, ವೆಜ್ ನಾನ್ ವೆಜ್ ತಿನಿಸುಗಳು ಇದು ಊರ್ಮನಿ ಹಬ್ಬದ ಹೈಲೆಟ್ಸ್ . ಕುಂದಾಪುರದಲ್ಲಿ ನಡೆದ ಪ್ರಥಮ ಬೀಚ್ ಉತ್ಸವ ಹಿನ್ನೆಲೆ ಸಹಸ್ರಾರು ಸಂಖ್ಯೆಯಲ್ಲಿ ಜನಸಾಗರ ಹರಿದುಬಂದಿತ್ತು. ಅಮ್ಯೂಸೆಮೆಂಟ್ ಪಾರ್ಕ್ಗಳಲ್ಲಿ ಮಕ್ಕಳು ದೊಡ್ಡವರು ಕುಣಿದು ಕುಪ್ಪಳಿಸಿದರು. ಮಕ್ಕಳು ಗಾಳಿಪಟ ಹಾರಿಸುವುದು, ಅದನ್ನ ನಿಯಂತ್ರಿಸಲು ಕಷ್ಟಪಡುವಾಗ ದೊಡ್ಡವರು ಅವರಿಗೆ ಸಾಥ್ ನೀಡುತ್ತಿದ್ದದ್ದು ಕಂಡು ಬರುತ್ತಿತ್ತು.
ಊರ್ಮನಿ ಹಬ್ಬದ ವಿಶೇಷ ಆಕರ್ಷಣೆಗಳೆಂದರೆ ಕಳೆದು ಹೋದ ಸಂಸ್ಕೃತಿಯ ಪುನರ್ ತೋರಿಸುವ ಪ್ರಯತ್ನ ಮಾಡಲಾಗಿತ್ತು. ಹಡಿಮಂಚ, ಗೊರ್ಬು, ಹುಲ್ಲು ಜಪ್ಪುವದು ಇವುಗಳನ್ನ ಪ್ರದರ್ಶನಕ್ಕಿಡಲಾಗಿತ್ತು. ಇವುಗಳೊಂದಿಗೆ ಆಗಮಿಸಿದವರು ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.ಊರ್ಮನಿ ಹಬ್ಬದಲ್ಲಿ ಮತ್ತೊಂದು ಜನಾಕರ್ಷಣೆಗೆ ಕಾರಣವಾಗಿದ್ದು ಭೂತಕೋಲದ ವೇಷ. ಇಡೀ ಬೀಚ್ ಉತ್ಸವದೆಲ್ಲೆಡೆ ಓಡಾಟ ನಡೆಸಿದ ಭೂತಕೋಲ ವೇಷದೊಂದಿಗೆ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ನಂತರ ವೇದಿಕೆ ಮೇಲೆ ಕಲಾವಿದೆಯೊಬ್ಬರು ರಂಗಿತರಂಗ ಚಿತ್ರದ ಡೆನ್ನಾನ ಗೀತೆಯನ್ನ ಹಾಡಿದ ಸಂದರ್ಭ ಆ ಗೀತೆಗೆ ಕುಣಿದು ಸಭಿಕರನ್ನ ಮನರಂಜಿಸಿದರು.
ಉದ್ಘಾಟನೆ ದಿನ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಪೂಜಾರಿ ಜಾಲಿರೈಡ್ ನಡೆಸಿದ್ದು ಎಲ್ಲರ ಆಕರ್ಷಣೆಗೆ ಕಾರಣವಾಯ್ತು. ಯಾವಾಗಲೂ ರಾಜಕೀಯದ ಬಿಸಿ ಮತ್ತು ಬ್ಯೂಸಿಯಲ್ಲಿರುವ ಶೆಟ್ಟರು ಶುಕ್ರವಾರ ಊರ್ಮನಿ ಹಬ್ಬಕ್ಕೆ ಬಂದು ಒಂದಿಷ್ಟು ಹೊತ್ತು ಕಳೆದು ಎಟಿವಿ ಬೈಕ್ ರೈಡ್, ಹಳೆ ಲ್ಯಾಂಬಿ ರಿಕ್ಷಾದಲ್ಲಿ ಕುಳಿತು ಸಮಯ ಕಳೆದರು.
ಒಟ್ಟಾರೆ ಊರ್ಮನಿ ಹಬ್ಬ ಅಪಾರ ಜನಸಾಗರವನ್ನ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು. ಬಹಳಷ್ಟು ಜನರನ್ನ ಆಕರ್ಷಿಸಿದ್ದಂತು ಸತ್ಯ. ಈ ವರ್ಷದ ಯಶಸ್ಸನ್ನ ಕಂಡು ಮುಂದಿನ ವರ್ಷವೂ ಕೂಡ ಊರ್ಮನಿ ಹಬ್ಬವನ್ನ ಆಯೋಜಿಸುವ ಕುರಿತು ಆಯೋಜಕರು ಚಿಂತನೆ ನಡೆಸಿದ್ದಾರೆ. ಮತ್ತು ಕಿನಾರಾ ಬೀಚ್ನಲ್ಲಿ ಪ್ರವಾಸೋಧ್ಯಮ ಅಭಿವೃದ್ಧಿಗೆ ಕೆಲ ಕಾರ್ಯಗಳನ್ನ ಮಾಡಲು ಚಿಂತನೆ ನಡೆಸಲಾಗಿದೆ.