ಮಂಜೇಶ್ವರ, ಸೆ 25 (Daijiworld News/MSP): ಮಂಜೇಶ್ವರ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯು ಡಿ ಎಫ್ , ಎಲ್ ಡಿ ಎಫ್ ಮತ್ತು ಬಿಜೆಪಿ ಮಗ್ನವಾಗಿದೆ. ಯುಡಿಎಫ್ ನಿಂದ ಎಂ . ಸಿ ಖಮರುದ್ದೀನ್ ಗೆ ಟಿಕೆಟ್ ದೊರಕುವ ಸಾಧ್ಯತೆ ಹೆಚ್ಚಾಗಿದೆ. ಈ ಕುರಿತು ಮುಸ್ಲಿಂ ಲೀಗ್ ಅಂತಿಮ ನಿರ್ಧಾರಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ. ಎಂ ಅಶ್ರಫ್ ರವರ ಹೆಸರೂ ಅಂತಿಮ ಪಟ್ಟಿಯಲ್ಲಿದ್ದರೂ ಖಮರುದ್ದೀನ್ ಬಗ್ಗೆ ಪಕ್ಷ ಒಲವು ತೋರಿದೆ ಎನ್ನಲಾಗಿದೆ.
ಎ. ಕೆ .ಎಂ ಅಶ್ರಫ್ ಪರ ಒಂದು ಬಣ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿದ್ದು, ಇದರಿಂದ ನಿನ್ನೆ ಘೋಷಣೆಯಾಗಬೇಕಿದ್ದ ಅಭ್ಯರ್ಥಿ ವಿಳಂಬವಾಗಿದೆ. ಅಂತಿಮ ಕ್ಷಣದಲ್ಲಿ ಅನಿರೀಕ್ಷಿತ ಬದಲಾವಣೆಯಾಗದಿದ್ದಲ್ಲಿ ಎಂ.ಸಿ ಖಮರುದ್ದೀನ್ ಗೆ ಟಿಕೆಟ್ ಖಚಿತವಾಗಿದೆ.
ಎಲ್ ಡಿ ಎಫ್ ನಿಂದ ಮಾಜಿ ಶಾಸಕ ಸಿ.ಎಚ್ ಕುಞ೦ಬು ಮತ್ತು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ. ಆರ್ ಜಯಾನಂದರ ಹೆಸರು ಅಂತಿಮಗೊಳಿಸಲಾಗಿದ್ದು , ಎಂ . ಸಿ ಖಮರುದ್ದೀನ್ ಯು ಡಿ ಎಫ್ ಅಭ್ಯರ್ಥಿಯಾದರೆ ಸಿ . ಎಚ್ ಕುಞ೦ಬು ರವರನ್ನು ಕಣಕ್ಕಿಳಿಸಲು ಸಿಪಿಎಂ ಚಿಂತನೆ ನಡೆಸಿದೆ. ಆದರೆ ಕೆ .ಆರ್ ಜಯಾನಂದರ ಹೆಸರು ಈಗ ಕೇಳಿಬರುತ್ತಿದೆ.
ಬಿಜೆಪಿ ಯಿಂದ ಕುಂಟಾರು ರವೀಶ ತಂತ್ರಿ , ಕೆ .ಶ್ರೀಕಾ೦ತ್ ಮತ್ತು ಕೆ . ಸತೀಶ್ಚಂದ್ರ ಭಂಡಾರಿ ಯವರ ಹೆಸರು ಕೇಳಿಬರುತ್ತಿದೆ. ಇವರ ಬದಲಿಗೆ ರಾಜ್ಯ ನಾಯಕ ಪಿ ಕೆ ಕೃಷ್ಣ ದಾಸ್ ರವರ ಹೆಸರೂ ಸಂಭಾವ್ಯ ಪಟ್ಟಿಯಲ್ಲಿದೆ. ಸೆ. 27 ರೊಳಗೆ ಮೂರೂ ಪಕ್ಷದ ಅಭ್ಯರ್ಥಿ ಗಳ ಘೋಷಣೆ ಹೊರಬೀಳಲಿದೆ.