ಉಡುಪಿ ಡಿ 31: ಉಡುಪಿ ಪರ್ಬದ ಅಂಗವಾಗಿ ಶ್ವಾನ ಪ್ರದರ್ಶನ ಡಿ 31 ರ ಭಾನುವಾರ ಅಜ್ಜರಕಾಡು ಭುಜಂಗ ಪಾರ್ಕಿನ ಬಯಲು ರಂಗ ಮಂದಿರದಲ್ಲಿ ನಡೆಯಿತು. ಕರ್ನಾಟಕ ವೈದ್ಯಕೀಯ ಸಂಘ ಉಡುಪಿ ಜಿಲ್ಲಾ ಶಾಖೆ, ಉಡುಪಿ ಪ್ರಾಣಿದಯಾ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಉದ್ಘಾಟಿಸಿದ್ರು. ಹತ್ತು ದಿನಗಳ ನಂತರ ಮನೆಗೆ ಬಂದರೆ ಕುಟುಂಬದವರಿಗಿಂತ ಹೆಚ್ಚಾಗಿ ಸ್ವಾಗತ ಕೋರುವುದು ಶ್ವಾನಗಳು. ತನ್ನ ಮಾಲೀಕನಿಗೆ ಅತೀ ನಿಷ್ಠೆಯಿಂದ ಇರುವ ಪ್ರಾಣಿ ಎಂದರೆ ಅದು ಶ್ವಾನ ಎಂದ್ರು. ಕಾರ್ಯಕ್ರಮದಲ್ಲಿ ಉಡುಪಿ ನಗರ ಸಭಾಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ಪೊಲೀಸ್ ವರಿಷ್ಟಾಧಿಕಾರಿ ಸಂಜೀವ್ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು . ಈ ಸಂದರ್ಭ ಲ್ಯಾಬ್ರೋ ಡಾಲ್, ಪಗ್, ಜರ್ಮನ್ ಶೆಫರ್ಡ್, ರಾಟ್ ವಿಲ್ಲರ್, ಮೊದಲಾದ ವಿವಿಧ ತಳಿಯ ಶ್ವಾನಗಳ ಪ್ರದರ್ಶನ ನಡೆಯಿತು.