ಮಂಜೇಶ್ವರ, ಸೆ 24 (DaijiworldNews/SM): ಮಂಜೇಶ್ವರ ವಿಧಾನಸಭಾ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಯುಡಿಎಫ್, ಎಲ್ ಡಿಎಫ್ ಮತ್ತು ಬಿಜೆಪಿ ತೀವ್ರ ಕಸರತ್ತು ನಡೆಸುತ್ತಿದ್ದೆ. ಈ ನಡುವೆಯೇ ಯುಡಿಎಫ್ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಎಂ.ಸಿ. ಖಮರುದ್ದೀನ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಅಧಿಕೃತ ಘೋಷಣೆ ಹೊರಡಿಸಲಾಗಿದೆ.
ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ. ಅಶ್ರಫ್ ರವರ ಹೆಸರು ಅಂತಿಮ ಪಟ್ಟಿಯಲ್ಲಿದ್ದರೂ ಕೂಡ ಅವರ ಬದಲು ಖಮರುದ್ದೀನ್ ಗೆ ಪಕ್ಷ ಮಣೆ ಹಾಕಿದೆ. ಇನ್ನು ಎ. ಕೆ.ಎಂ. ಅಶ್ರಫ್ ಪರ ಒಂದು ಬಣ ಪಕ್ಷದ ಮುಖಂಡರ ಮೇಲೆ ಒತ್ತಡ ಹೇರಿತ್ತು. ಈ ಕಾರಣದಿಂದಾಗಿ ಅಭ್ಯರ್ಥಿ ಘೋಷಣೆಗೆ ವಿಳಂಬವಾಗಿತ್ತು. ಅಂತಿಮವಾಗಿ ಕಮರುದ್ದೀನ್ ಗೆ ಟಿಕೆಟ್ ಫೈನಲ್ ಮಾಡಲಾಗಿದೆ.
ಇನ್ನು ಎಲ್ ಡಿ ಎಫ್ ನಿಂದ ಮಾಜಿ ಶಾಸಕ ಸಿ.ಎಚ್. ಕುಞ೦ಬು ಮತ್ತು ಸಿಪಿಎಂ ಜಿಲ್ಲಾ ಸಮಿತಿ ಸದಸ್ಯ ಕೆ. ಆರ್ ಜಯಾನಂದರ ಹೆಸರು ಅಂತಿಮಗೊಳಿಸಲಾಗಿದ್ದು, ಅದಿಕೃತ ಘೋಷಣೆ ಬಾಕಿ ಉಳಿದುಕೊಂಡಿದೆ. ಇನ್ನು ಬಿಜೆಪಿ ಯಿಂದ ಕುಂಟಾರು ರವೀಶ ತಂತ್ರಿ , ಕೆ .ಶ್ರೀಕಾ೦ತ್ ಮತ್ತು ಕೆ. ಸತೀಶ್ಚಂದ್ರ ಭಂಡಾರಿ ಯವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ. ಇವರ ಬದಲಿಗೆ ರಾಜ್ಯ ನಾಯಕ ಪಿ ಕೆ ಕೃಷ್ಣ ದಾಸ್ ರವರ ಹೆಸರೂ ಕೂಡ ಸಂಭಾವ್ಯ ಪಟ್ಟಿಯಲ್ಲಿದೆ. ಸೆ. ೨೭ ರೊಳಗೆ ಮೂರೂ ಪಕ್ಷದ ಅಭ್ಯರ್ಥಿಗಳ ಘೋಷಣೆ ಯಾಗಲಿದೆ.