ಮಂಗಳೂರು,ಸೆ 25 (DaijiworldNews/SM): ನಗರದ ಮಾಲ್ ವೊಂದರಲ್ಲಿ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕನನ್ನು ವಿಶ್ವಹಿಂದೂ ಪರಿಷದ್ ಬಜರಂಗದಳದ ಮುಖಂಡರು ಭೇಟಿಯಾಗಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕೆತ್ಸೆಪಡೆಯುತ್ತಿರುವ ಯುವಕನಿಗೆ ಸಂಘಟನೆ ಮುಖಂಡರು ಧೈರ್ಯ ತುಂಬಿದರು. ಹಾಗೂ ಆತನ ಆರೋಗ್ಯ ವಿಚಾರಿಸಿದರು. ನಗರದ ಮಳಿಗೆಯೊಂದರಲ್ಲಿ ವಿದ್ಯಾರ್ಥಿಗಳ ತಂಡ ಇದ್ದಂತಹ ಸಂದರ್ಭ ಯಾವುದೋ ವಿಚಾರವೊಂದಕ್ಕೆ ಸಂಬಂಧಿಸಿದಂತೆ ಮಂಜುನಾಥ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.
ಮಂಜುನಾಥ್ ಅವರ ಮೇಲೆ ವಿದ್ಯಾರ್ಥಿಗಳು ಥಳಿಸುವುದನ್ನು ವೀಡಿಯೋ ಮಾಡಿದ್ದಾರೆ. ಹಾಗೂ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ಮಂಜುನಾಥ್ ಎಂಬಾಂತ "ಇದು ಹಿಂದೂ ರಾಷ್ಟ್ರ " ಎಂದು ಹೇಳುತ್ತಿರುವುದನ್ನು ಗೋಚರಿಸುತ್ತಿದೆ. 'ಯುವಕ ಹಾಗೂ ವಿದ್ಯಾರ್ಥಿಗಳ ನಡುವೆ ವಾಗ್ವಾದ ನಡೆದು ವಿದ್ಯಾರ್ಥಿಗಳ ಗುಂಪಿನಿಂದ ದೂರುದಾರ ಮಂಜುನಾಥ್ ನನ್ನು ಥಳಿಸಲಾಯಿತು' ಎಂದು ತಿಳಿದುಬಂದಿದೆ.