ಉಡುಪಿ, ಸೆ 26 (Daijiworld News/RD): ಉಡುಪಿ, ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್ಸೊಂದು ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರನ್ನು ಅಪಾಯಕಾರಿ ಯಾದ ರೀತಿಯಲ್ಲಿ ಹೇರಿಕೊಂಡು ಸಂಚಾರ ನಡೆಸುತ್ತಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ವೀಡಿಯೋದಲ್ಲಿ ಎಕೆಎಂಎಸ್ ಹೆಸರಿನ ಬಸ್ಸು ಉಡುಪಿಯಿಂದ ಮಂಗಳೂರು ನಡುವೆ ಸಂಚರಿಸುವ ಕೊನೆಯ ಬಸ್ಸಾಗಿದ್ದು. ರಾತ್ರಿ ಸುಮಾರು 9:30 ರಸುಮಾರಿಗೆ ಉಡುಪಿಯಿಂದ ಪ್ರಯಾಣಿಕರನ್ನು ಹತ್ತಿಸಿಕೊಂಡು ಮಂಗಳೂರಿನತ್ತ ಸಾಗಿದೆ. ಅದರೆ ಬಸ್ಸಿನಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಬಸ್ಸಿನ ಫುಟ್ ಬೋರ್ಡ್ ಹಾಗೂ ಹಿಂಬದಿಯ ಏಣಿಯಲ್ಲಿ ನೇತಾಡಿಕೊಂಡು ಹೋಗಿರುವುದು ಕಂಡು ಬಂದಿದೆ. ಪ್ರಯಾಣಿಕರಿಗೆ ನಿಲ್ಲಲು ಜಾಗವಿಲ್ಲದೇ ಎಕೆಎಂಎಸ್ ವೆಗದೂತ ಬಸ್ಸಿನ ನಿರ್ವಾಹಕನು ಬೆರೊಂದು ಬಸ್ಸನ್ನು ಹತ್ತಿಕೊಂಡು ಈ ಬಸ್ಸನ್ನು ಹಿಂಬಾಲಿಸಿದ್ದಾನೆ.
ಇನ್ನು ಈ ವಿಡಿಯೋ ವೈರಲ್ ಅದ ನಂತರ ಸಾರ್ವಜನಿಕ ವಲಯದಲ್ಲಿ ಅಕ್ರೋಶ ವ್ಯಕ್ತವಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆಯೆ ಪೊಲೀಸರ ಗಮನಕ್ಕೆ ಬಂದಿದೆ. ಬಸ್ ಮಾಲಕರಿಗೆ ಬುಧವಾರ ಕೋರ್ಟ್ ನೋಟಿಸ್ ನೀಡಲಾಗಿದೆ. ಈ ಘಟನೆ ಯಾವಾಗ ನಡೆಯಿತು ಎನ್ನುವುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ನಿಯಮ ಉಲ್ಲಂಘನೆಯಾಗಿರುವುದು ಕಂಡು ಬಂದಿರುವುದರಿಂದ ಕಾನೂನು ಕ್ರಮ ಜರುಗಿಸಲಾಗಿದೆ. ಬಸ್ ಮಾಲಕನಿಗೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಲಾಗುತ್ತದೆ’ ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದ್ದಾರೆ.
ಸದ್ಯ ಪೊಲೀಸರು ಬಸ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಬಸ್ ನಿರ್ವಾಹಕರು ತಿಳಿಸಿದ್ದಾರೆ.