ಉಡುಪಿ, ಸೆ 26 (Daijiworld News/MSP): ಉಡುಪಿಯ ಎಂ ಜಿ ಎಂ ಬಳಿಯಿರುವ, ಬುಡ್ನಾರು ಗ್ರಾಮಕ್ಕೆ ಕೊರಗಜ್ಜನ ಸನ್ನಿಧಾನದಲ್ಲಿ ಕೊರಗಜ್ಜನ ವಾಹನವಾಗಿರುವ ಆಮೆಯೊಂದು ಪ್ರತ್ಯಕ್ಷವಾಗಿದ್ದು, ಇದು ಭಕ್ತಾದಿಗಳ ಆಶ್ಚರ್ಯಕ್ಕೆ ಕಾರಣವಾಗಿದೆ. ಮಂಗಳವಾರದಂದು ರಾತ್ರಿ ಕ್ಷೇತ್ರದ ಅರ್ಚಕ ಪೂಜೆ ವಿಧಿ ವಿಧಾನಕ್ಕೆಂದು ಹೊರ ಹೋಗಿ ವಾಪಸ್ಸು ಬಂದು ಕೊರಗಜ್ಜನ ದೈನಂದಿನ ಪೂಜೆಗೆಂದು ಮುಂದಾದಾಗ, ಕೊರಗಜ್ಜನ ಮೂರ್ತಿ ಬಳಿ ಆಮೆಯೊಂದು ಕಂಡು ಬಂದಿದೆ. ಇದನ್ನ ಕಂಡು ಸನ್ನಿಧಿ ಅರ್ಚಕರಾದ ನವೀನ್ ಪಾತ್ರಿ ಅಶ್ಚರ್ಯಚಕಿತರಾಗಿದ್ದಾರೆ.
ಈ ಪ್ರದೇಶವು ನಗರ ಮಧ್ಯಭಾಗದಲ್ಲಿ ಆಮೆಗಳು ವಾಸಿಸುವ ಪ್ರದೇಶವಲ್ಲ ಅದ್ರೂ, ಅಮೆ ಕೊರಗಜ್ಜನ ಸನ್ನಿಧಿಯಲ್ಲಿ ಕಂಡು ಅಶ್ಚರ್ಯಗೊಂಡು ಬಕೆಟ್ ಒಂದರಲ್ಲಿ ಹಾಕಿ ರಾತ್ರಿ ಸನ್ನಿಧಿಯ ಪೂಜೆ ಮುಗಿಸಿ ಮಲಗಿದ ಅರ್ಚಕರು ಬೆಳೆಗೆದ್ದು ನೋಡಿದಾಗ ಅಮೆಯೂ ಮತ್ತೆ ಕೊರಗಜ್ಜನ ಮೂರ್ತಿ ಕೆಳಗಡೆ ಬಂದಿರುವುದು ಕಂಡು ಬಂದಿದೆ. ಸಾಧಾರಣವಾಗಿ ಆಮೆಯೂ ನಿಂತಲ್ಲಿ ನಿಲ್ಲದ ಪ್ರಾಣಿ. ಅದ್ರೆ ಇಲ್ಲಿ ಬಂದಿರುವ ಅಮೆ ಕೊರಗಜ್ಜನ ಮೂರ್ತಿ ಬಳಿಯಿಂದ ಕದಲದೆ ನಿಂತಿರುವುದನ್ನು ಕಂಡು ಸನ್ನಿಧಿಗೆ ಬರುವ ಭಕ್ತರು ಕೂಡಾ ಭಾವಪರವಶರಾಗಿದ್ದಾರೆ
ಆಮೆ ಕೊರಗಜ್ಜನ ವಾಹನವಾಗಿದ್ದು , ಕೊರಗಜ್ಜನ ಸನ್ನಿಧಿಯಲ್ಲಿಯೇ ಆಮೆ ಕಂಡುಬಂದಿದ್ದನ್ನು ನೋಡಲು ಕೊರಗಜ್ಜ ಸ್ವಾಮಿ ಭಕ್ತರು ಧಾವಿಸುತ್ತಿದ್ದಾರೆ. ಕೊರಗಜ್ಜ ಹಾಗೂ ಮೂಕಾಂಬಿಕೆ ಹಾಗೂ ಪರಿವಾರ ದೈವಗಳ ಕ್ಷೇತ್ರ ವಾಗಿದ್ದು ,ಈ ಹಿಂದೆಯೂ ಇದೆ ರೀತಿಯ ಅದ್ಭುತಗಳು ಈಕ್ಷೇತ್ರದಲ್ಲಿ ಕಾಣಿಸಿಕೊಂಡಿತ್ತು.
ಅಲ್ಲಿನ ಅರ್ಚಕರಾದ ನವೀನ್ ಪಾತ್ರಿಗಳು ಹೇಳುವಂತೆ, ’ ಕೊಳ, ನದಿ ಹರಿವು ಇಲ್ಲದೆ ಇದ್ದರೂ, ಇದು ನಮಗೆ ಅಜ್ಜನಿಂದ ಅಭಯ ಹಸ್ತ ನೀಡುವ ಸೂಚನೆ ಇರಬಹುದೆಂಬ ನಂಬಿಕೆ. ಅಕ್ಟೋಬರ್ 5 ಕ್ಕೆ ಈ ಕ್ಷೇತ್ರದಲ್ಲಿ ಕೊರಗಜ್ಜನ ಕೋಲ ನಡೆಯಲಿದ್ದು ,ಇದಕ್ಕೂ ಮುನ್ನ ಕೊರಗಜ್ಜನ ವಾಹನ ವಾಗಿರುವ ಆಮೆ ಕಾಣಿಸಿಕೊಂಡಿರುವುದು ಆಶ್ಚರ್ಯಕ್ಕೆ ಕಾರಣವಾಗಿದೆ.
ಇಲ್ಲಿನ ಪಾತ್ರಿಗಳೇ ಹೇಳುವಂತೆ 2-3 ವರ್ಷದ ಹಿಂದೆ ಕೂಡ ಪೂಜೆ ಆಗುವ ಸಮಯದಲ್ಲಿ ಸರ್ಪವೊಂದು ಬಂದಿತ್ತಂತೆ. ಈ ಕ್ಷೇತ್ರದಲ್ಲಿ ಮೈಲಿಗೆ ಆದರೆ ಆ ತಕ್ಷಣ ಸರ್ಪ ಬಂದು ಸೂಚನೆ ಕೊಡುತ್ತದೆ ಎಂಬುದು ಇವರ ನಂಬಿಕೆ. ಇದು 10-12 ವರ್ಷಗಳ ಹಿಂದಿನ ಗುಡಿಯಾಗಿದ್ದು ಏನಾದರೂ ಪವಾಡಗಳು ನಡೆಯುತ್ತವೆ ಎನ್ನುತ್ತಾರೆ ಕಳೆದ 20 ವರ್ಷಗಳಿಂದ ಕೊರಗಜ್ಜನ ಸೇವೆ ಸಲ್ಲಿಸುತ್ತಿವ ಪಾತ್ರಿ.