ಬೆಂಗಳೂರು ಜ 1 : ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷಾಚರಣೆ ಸಂಭ್ರಮ ಆದ್ದೂರಿಯಾಗಿದ್ದಂತೆ, ಪೊಲೀಸರ ದಂಡ ವಸೂಲಿ ಕೂಡಾ ಜೋರಾಗೇ ಇತ್ತು. ಹೊಸ ವರ್ಷದ ಸಂಭ್ರಮಕ್ಕೆ ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಂಡಿದ್ದ ಪೊಲೀಸರು ಸಂಭ್ರಮದ ಹೆಸರಿನಲ್ಲಿ ಡ್ರಿಂಕ್ ಎಂಡ್ ಡ್ರೈವ್ ಬೇಡ ಎಂದೂ ಸಾರಿ ಹೇಳಿದ್ದರು. ಆದ್ರೂ ಮೆಟ್ರೋ ಸಿಟಿಯಲ್ಲಿ ಕುಡಿದು ವಾಹನ ಚಲಾಯಿಸಿದವರರು ಸಾಕಷ್ಟು ಪ್ರಮಾಣದಲ್ಲಿದ್ದದ್ದು ಪೊಲೀಸರ ಭರ್ಜರಿ ಕಾರ್ಯಾಚರಣೆ ನಂತರ ಬೆಳಕಿಗೆ ಬಂದಿದೆ.
ಹೌದು ಸುಮಾರು 1367 ಜನ ಮದ್ಯ ಸೇವಿಸಿ ವಾಹನ ಚಲಾವಣೆ ಮಾಡಿರುವುದು ಪತ್ತೆಯಾಗಿದೆ. ಅಷ್ಟೂ ಜನರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಸೂಲಿ ಮಾಡಿಕೊಂಡು ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಿನ್ನೆ ರಾತ್ರಿ 9 ಗಂಟೆಯಿಂದಲೇ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ಪತ್ತೆ ಕಾರ್ಯಾಚರಣೆ ನಡೆಸಿದ್ದರು. ಇವೆಲ್ಲದರ ನಡುವೆ ಕುಡುಕರ , ಪುಂಡ ಪೋಕರಿಗಳ , ಅವಾಜ್ ಕಾಟ ಪೊಲೀಸರಿಗೂ ತಪ್ಪಲಿಲ್ಲ. ಹಲವೆಡೆ ಮಹಿಳೆಯರು ಕ್ಯಾಬ್ ಆಟೋ ಸಿಗದೇ ಪರದಾಡಿ ಪೊಲೀಸರೇ ವಾಹನ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದ ಘಟನೆ ನಡೆಯಿತು ..