ಮಂಜೇಶ್ವರ, ಸೆ 26 (Daijiworld News/MSP): ಮಂಜೇಶ್ವರ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಎಲ್ ಡಿ ಎಫ್ ತನ್ನ ಅಭ್ಯರ್ಥಿಯಾಗಿ ಘೋಷಣೆ ಮಾಡಿದೆ. ಎಲ್ ಡಿಎಫ್ ಅಭ್ಯರ್ಥಿಯಾಗಿ ಎಂ . ಶಂಕರ ರೈ ಅವರನ್ನು ಪಕ್ಷ ಘೋಷಿಸಿದೆ.
ಕೊನೆ ಕ್ಷಣದ ತನಕ ಮಾಜಿ ಶಾಸಕ ಸಿ .ಎಚ್ ಕುಞ೦ಬು ರವರ ಹೆಸರೂ ಕೇಳಿಬರುತ್ತಿದ್ದರೂ ಅನಿರೀಕ್ಷಿತವಾಗಿ ಶಂಕರ ರೈ ಅಭ್ಯರ್ಥಿಯಾಗಿ ಘೋಷಣೆ ಮಾಡಲಾಗಿದೆ. ಯಕ್ಷಗಾನ ಕಲಾವಿದರಾದ ಶಂಕರ ರೈ ಈ ಹಿಂದೆ ಕೇರಳ ತುಳು ಅಕಾಡಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಜಿಲ್ಲಾ ಪಂಚಾಯತ್ ಸದಸ್ಯರಾಗಿಯೂ ಕೂಡ ಸೇವೆ ಸಲ್ಲಿಸಿದ್ದರು. ಅಲ್ಲದೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಯು ಡಿ ಎಫ್ ಎಂ. ಸಿ ಖಮರುದ್ದೀನ್ ರವರನ್ನು ಕಣಕ್ಕಿಳಿಸಿದೆ. ಬಿಜೆಪಿ ಇನ್ನೂ ಗೊಂದಲದಲ್ಲಿದೆ . ನಾಲ್ವರ ಸಂಭಾವ್ಯ ಪಟ್ಟಿ ತಯಾರಿಸಿದ್ದರೂ ಇನ್ನೂ ಅಂತಿಮ ಗೊಳಿಸಿಲ್ಲ.
ಈ ನಡುವೆ ಉಪಚುನಾವಣೆಯ ಹಿನ್ನಲೆಯಲ್ಲಿ ಗುರುವಾರ ಒಂದು ನಾಮಪತ್ರ ಸಲ್ಲಿಕೆ . ಪಕ್ಷೇತರರಾಗಿ ಕಣ್ಣೂರು ಅಬ್ದುಲ್ಲ ನಾಮಪತ್ರ ಸಲ್ಲಿಸಿದ್ದಾರೆ . ಇದರಿಂದ ಇದುವರೆಗೆ ನಾಮಪತ್ರ ಸಲ್ಲಿಸಿದವರ ಸಂಖ್ಯೆ ಎರಡಕ್ಕೇರಿದೆ.