ಕುಂದಾಪುರ, ಸೆ 27 (Daijiworld News/RD): ಕೆನಡಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಫವರ್ ಲಿಪ್ಟಿಂಗ್ ಸ್ಪರ್ಧೆಯಲ್ಲಿ ದಾಖಲೆ ನಿರ್ಮಿಸಿದ ಚಿನ್ನದ ಹುಡುಗ ವಿಶ್ವನಾಥ ಗಾಣಿಗ ಸೆ.26ರಂದು ತನ್ನ ಹುಟ್ಟೂರಿಗೆ ಆಗಮಿಸಿದ್ದಾರೆ.
ಈ ಸಂದರ್ಭ ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು, ಜತೆಗೆ ಕುಂದಾಪುರ ತಾಲೂಕಿನ ಬಾಳಿಕೆರೆಯ ವಿಶ್ವನಾಥ ಗಾಣಿಗರ ಹುಟ್ಟೂರಿನ ಅನೇಕ ಸಂಘ ಸಂಸ್ಥೆಗಳು ಸಾಲಿಗ್ರಾಮಕ್ಕೆ ಆಗಮಿಸಿ ಶ್ರೀ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಂತರ ಅವರಿಗೆ ಗೌರವವನ್ನು ಸಲ್ಲಿಸಿದರು.
ತೆರೆದ ಜೀಪ್ನಲ್ಲಿ ಮೆರವಣಿಗೆ. ಮೈಕ್, ಚಂಡೆ, ಒಂದಷ್ಟು ಕಾರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದು ವಿಶ್ವನಾಥ್ ಕೋಟಕ್ಕೆ ಆಗಮಿಸುತ್ತಿದ್ದಂತೆ ಕೋಟದ ಪಂಚವರ್ಣ ಯುವಕ ಮಂಡಲ, ಗಿಳಿಯಾರು ಯುವಕ ಮಂಡಲ, ವಿಪ್ರಬಳಗ ಸಾಲಿಗ್ರಾಮ, ಜೆಸಿಐ ಕೋಟ ಬ್ರೀಗೆಡಿಯರ್, ದ.ಸಂ.ಸ ಕೋಟ ಹೋಬಳಿ, ಕೋಟ ಆಟೋ ಚಾಲಕ ಮಾಲಕ ಸಂಘ ಮತ್ತಿತರರು ಶಾಲು ಹೊದಿಸಿ ಫಲಪುಷ್ಭ ನೀಡಿ ಸ್ವಾಗತಿಸಿ ಗೌರವಿಸಿದರು. ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇವರು ಆರತಿ ಬೆಳಗಿ,ಹೂವಿನ ಮಳೆ ಸುರಿಸಿದರು. ಬಳಿಕ ತೆಕ್ಕಟ್ಟೆ ಕೋಟೇಶ್ವರ ಮಾರ್ಗವಾಗಿ ಕುಂದಾಪುರಕ್ಕೆ ಬಂದು ಪೇಟೆಯಲ್ಲಿ ಪುರ ಮೆರವಣಿಗೆ ನಡೆಸಿ ತಲ್ಲೂರು ಹೆಮ್ಮಾಡಿ ಮಾರ್ಗವಾಗಿ ಅವರ ಮನೆಗೆ ಕರೆತರಲಾಯಿತು.
ಪಂಚವರ್ಣ ಯುವಕ ಮಂಡಲದ ಗೌರವ ಸಲಹೆಗಾರ ಚಂದ್ರ ಆಚಾರ್ಯ ಶಾಲು ಹೋದಿಸಿ,ದ.ಸಂ.ಸ ಕೋಟ ಹೋಬಳಿಯ ಮುಖಂಡ ಟಿ.ಮಂಜುನಾಥ ಗಿಳಿಯಾರ್ ಫಲಪುಷ್ಭ ಹಾಗೂ ಕಾರಂತ ಪ್ರತಿಷ್ಠಾನದ ಸದಸ್ಯ ಎಂ. ಸುಬ್ರಾಯ ಆಚಾರ್ಯ ಹಾರ ತೋಡಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಪಂಚವರ್ಣ ಯುವಕ ಮಡಲದ ಅಧ್ಯಕ್ಷ ಗಿರೀಶ್ ಆಚಾರ್ಯ, ಸ್ಥಾಪಾಕಾಧ್ಯಕ್ಷ ಸುರೇಶ್ ಗಾಣಿಗ, ಕಾರ್ಯಾಧ್ಯಕ್ಷ ರವೀಂದ್ರ ಕೋಟ, ಕಾರ್ಯದರ್ಶಿ ಅಜಿತ್ ಆಚಾರ್ಯ, ಜೊತೆಕಾರ್ಯದರ್ಶಿ ಸಂದೇಶ್ ಆಚಾರ್ಯ, ಉಪಾಧ್ಯಕ್ಷ ಅಮೃತ್ ಜೋಗಿ, ಗಿಳಿಯಾರು ಯುವಕ ಮಂಡಲದ ಅಧ್ಯಕ್ಷ ರಾಘವೇಂದ್ರ ಮಠಿನಕೆರೆ, ಸ್ಥಾಪಕಾಧ್ಯಕ್ಷ ಸುರೇಶ್ ಗಿಳಿಯಾರ್, ಜೆಸಿಐ ಕೋಟ ಬ್ರೀಗೆಡಿಯರ್ ಅಧ್ಯಕ್ಷ ಶೇಷಗಿರಿ ನಾಯಕ್, ನಿಯೋಜಿತ ಅಧ್ಯಕ್ಷ ಪ್ರದೀಪ್ ಶೆಟ್ಟಿ, ಸ್ಥಾಪಕ ಕೇಶವ ಆಚಾರ್ಯ, ಪ್ರದೀಪ್ ಪೂಜಾರಿ, ಚೈತ್ರ ಆಚಾರ್ಯ, ಅಭಿಷೇಕ್, ವಿಪ್ರ ಮಹಿಳಾ ಬಳಗ ಸಾಲಿಗ್ರಾಮ ಇದರ ಭಾರತಿ ಮಯ್ಯ, ಶಿವಪ್ರಭಾ ಅಲ್ಸೆ, ಶಶಿಕಲಾ, ಜ್ಯೋತಿ ಕೆದಿಲಾಯ, ಸುಜಾತ ಬಾಯಿರಿ, ಪತ್ರಕರ್ತ ಚಂದ್ರಶೇಖರ್ ಬೀಜಾಡಿ, ನಾಗರಾಜ ಗಾಣಿಗ ಸಾಲಿಗ್ರಾಮ, ಕೋಟ ಗಾಣಿಗ ಯುವ ಸಂಘದ ಅಧ್ಯಕ್ಷ ವಿಶ್ವನಾಥ ಗಾಣಿಗ ಉಪಸ್ಥಿತರಿದ್ದರು.