ಬೆಳ್ತಂಗಡಿ ಜ 1 : ನ್ಯೂ ಇಯರ್ ಪಾರ್ಟಿ ಮುಗಿಸಿ ಕಂಠ ಮೂರ್ತಿ ಕುಡಿದು ಬಂದ ಮಗನೊಬ್ಬ ತಂದೆಗೆ ಗಾಜಿನ ಚೂರಿನಲ್ಲಿ ಇರಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಇಲ್ಲಿನ ಚರ್ಚ್ ಕ್ರಾಸ್ ಬಳಿಯ ನಿವಾಸಿ ಮಂಜುನಾಥ್ ಎಂಬರ ಪುತ್ರ ನವೀನ್ ಎಂಬಾತ ಈ ದುಷ್ಕೃತ್ಯ ನಡೆಸಿದ್ದಾನೆ. ಡಿ 31 ರ ತಡರಾತ್ರಿ ಕುಡಿತದ ಅಮಲಿನಲ್ಲಿದ್ದ ನವೀನ್ ತನ್ನ ಮನೆಗೆ ಬಂದು ಏಕಾಏಕಿ ಕೈಗೆ ಸಿಕ್ಕ ವಸ್ತುಗಳಿಂದ ಕಿಟಕಿ-ಗಾಜು, ಟಿವಿಗಳನ್ನು ಹಾನಿಗೊಳಿಸಿದ್ದಾನೆ.
ತಕ್ಷಣ ಎಚ್ಚೆತ್ತುಕೊಂಡ ಆತನ ತಂದೆ ಮಂಜುನಾಥ್ ಮತ್ತು ಸಹೋದರರು ನವೀನ್ ಗೆ ಥಳಿಸಲು ಮುಂದಾಗಿದ್ದಾರೆ. ಆಗ ಅಲ್ಲೆ ಇದ್ದ ಮಚ್ಚನ್ನು ಎತ್ತಿಕೊಂಡ ನವೀನ್ ಮನೆಯವರೆಲ್ಲರ ಮೇಲೆ ದಾಳಿ ಮಾಡಿ ಬೆದರಿಸಲು ಯತ್ನಿಸಿದ್ದಾನೆ . ಬಳಿಕ ಗಾಜಿನ ಚೂರನ್ನು ತೆಗೆದುಕೊಂಡು ತಂದೆಯ ಹೊಟ್ಟೆಗೆ ಚುಚ್ಚಿದ್ದಾನೆ. ಈತನ ಅವಾಂತರಕ್ಕೆ ಬೊಬ್ಬಿಟ್ಟಾಗ ನೆರೆಹೊರೆಯವರು ಧಾವಿಸಿ ಬಂದಿದ್ದಾರೆ. ಈ ಸಂದರ್ಭ ಬಳಸಿಕೊಂಡ ನವೀನ್ ಮನೆಯಿಂದ ಪರಾರಿಯಾಗಿದ್ದಾನೆ. ತಕ್ಷಣ ಗಾಯಗೊಳಗಾದ ನವೀನ್ ತಂದೆ ಮಂಜುನಾಥ್ ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆಸಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ.