ಉಡುಪಿ, ಸೆ 27 (Daijiworld News/RD): ಕಳೆದ ಎರಡು ವರ್ಷಗಳಿಂದ ನೆನೆಗುದಿಗೆ ಬಿದ್ದು ಬಡ ಕಾರ್ಮಿಕರಿಗೆ ಮಾತ್ರವಲ್ಲದೆ ಕರಾವಳಿಯ ಆರ್ಥಿಕತೆಗೆ ಮಹಾ ಹೊಡೆತ ನೀಡಿದ್ದ ಮರಳು ಸಮಸ್ಯೆ ನಿವಾರಣೆಯಾಗಿ ಇಂದಿನಿಂದ ಮತ್ತೆ ಮರಳು ಗಣಿಗಾರಿಕೆಗೆ ಚಾಲನೆ ನೀಡಲಾಗಿದೆ. ಕೈಗೆಟುಕದ ಬೆಲೆಗೆ ದಾಪುಗಾಲು ಇಟ್ಟಿದ್ದ ಮರಳು ಇನ್ನು ಜನಸಾಮಾನ್ಯರಿಗೆ ಅನ್ನವಾಗಲಿದೆ.
ಕಳೆದ ಹಲವು ಸಮಯಗಳಿಂದ ಜಿಲ್ಲೆಯಲ್ಲಿ ಮರಳಿನ ಸಮಸ್ಯೆ ಇದ್ದುರಿಂದಾಗಿ ಈಗ ಪ್ರಯೋಗಿಕವಾಗಿ ಮರಳನ್ನು ಆಪ್ ಮುಖಾಂತರ ನೀಡಲಾಗುವುದಿಲ್ಲ. ಆದರೆ ಬಜೆಯಲ್ಲಿನ ಹೂಳನ್ನು ತೆಗೆಯಲು ಈಗಾಗಲೇ ವರ್ಕ್ ಆರ್ಡರ್ ನೀಡಿದ್ದು ಇಲ್ಲಿ ಪ್ರಯಾಗಿಕವಾಗಿ ಆಪ್ ನ್ನು ಬಳಸಿ ಮರಳು ವಿತರಿಸಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.
ಕಳೆದ ಬಾರಿ ಮರಳು ದಿಬ್ಬಗಳನ್ನು ಗುರುತಿಸುವಾಗ ಮೀನುಗಾಋಇಕೆ ನಡೆಸುವ ಕೆಲವೊಂದು ಪ್ರದೇಶ ಗಳಲ್ಲಿ ಮರಳಿನ ದಿಬ್ಬಗಳನ್ನು ಗುರುತಿಸಲಾಗಿತ್ತು. ಇಂತಹ ಕಡೆಗಳಲ್ಲಿ ಅಲ್ಲಿನ ಮೀನುಗಾರರೊಂದಿಗೆ ಮತನಾಡಿ ಅವರ ಬೋಟಿನ ಸಂಚಾರಕ್ಕೆ ಮರಳು ಅಡ್ಡಿಯಾಗುತಿದ್ದಲ್ಲಿ ಅಲ್ಲಿ ಮರಳು ತೆಗೆಯಲು ಅನುಮತಿ ನೀಡುತ್ತೇವೆ ಇಲ್ಲದಿದ್ದಲ್ಲಿ ಬೇರೆ ಪ್ರದೇಶಗಳಲ್ಲಿ ದಿಬ್ಬಗಳನ್ನು ಗುರುತಿಸಲಾಗುವುದು. ನಾನ್ ಸಿಆರ್ ಝಡ್ ಪ್ರದೇಶದಲ್ಲಿ 24 ಕಡೆಗಳಲ್ಲಿ ಮರಳು ತೆಗೆಯಲು ಟೆಂಡರ್ ಕರೆಯಲಾಗಿತ್ತು ಆದರೆ ಕೇವಲ ಇಬ್ಬರು ಟೆಂಡರ್ ಮಾತ್ರ ಆಸಕ್ತಿ ತೋರಿಸಿದ್ದಾರೆ ಅವರಿಗೆ ವರ್ಕ್ ಆಡರ್ರ್ ನೀಡಿದ್ದು ಟೆಂಡರ್ ನಿಯಮಗಳನ್ನು ಸರಳೀಕರಿಸಿ ಮತ್ತೆ ಟೆಂಡರ್ ಕರೆಯಲಾಗುವುದು ಎಂದವರು ತಿಳಿಸಿದರು.
ಇನ್ನುಳಿದ 22 ಬ್ಲಾಕ್ ಗಳಿಗೆ ಟೆಂಡರ್ ಕರೆದಿಲ್ಲ. ಟೆಂಡರ್ ನಿಯಮಗಳನ್ನು ಸರಳೀಕರಿಸಲು ಪ್ರಸ್ತಾವನೆ ಕಳುಹಿಸಲಾಗಿದೆ.
ಬಜೆ ಡ್ಯಾಂನಲ್ಲಿ ಹೂಳು ತೆಗೆಯಲು ವರ್ಕ್ ಆರ್ಡರ್ ಕೊಡಲಾಗಿದೆ. ಇದು ಪ್ರಯೋಗಾತ್ಮಕವಾಗಿ ನಡೆಯುತ್ತೆ. ಒಂದು ವರ್ಷಕ್ಕೆ ಕೊಡುವ ಅನುಮತಿ ಪತ್ರವನ್ನು ಮೂರು ತಿಂಗಳಿಗೆ ಸೀಮಿತ ಗೊಳಿಸಲಾಗಿದೆ. ಪುನಃ ಬೇಕಾದರೆ ಅವರು ಮರಳು ಆಪ್ ಗೆ ಸೇರಬೇಕಾಗುತ್ತದೆ .