ಉಡುಪಿ ಜ 1: ಇಲ್ಲಿನ ಸಂತೆಕಟ್ಟೆಯ ಕಲ್ಯಾಣಪುರದಲ್ಲಿ ಒಂದು 800 ವರ್ಷಗಳ ಇತಿಹಾಸವಿರುವ ಈ ಕೆರೆ ಈಗ ಪ್ಲಾಸ್ಟಿಕ್, ಬಾಟಲ್ಸ್, ಸತ್ತ ಪ್ರಾಣಿಗಳ ಕಳೇಬರ, ತ್ಯಾಜ್ಯಗಳು ತುಂಬಿರುವ ಮೋರಿಯಂತಾಗಿದೆ. ಇದೇ ಕಲ್ಯಾಣಪುರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಅಕ್ಕ-ಪಕ್ಕದ ಗದ್ದೆಗೆ ಜೀವಜಲವಾಗಿದ್ದ ಅಗಸನ ಕೆರೆ ಈ ಮಾಲಿನ್ಯಗೊಂಡು ವಿಷಯುಕ್ತವಾಗಿದೆ. ಬಟ್ಟೆ ಒಗೆಯುವ ಉದ್ದೇಶಕ್ಕಾಗಿ ಈ ಕೆರೆ ಬಳಕೆಯಾಗುತ್ತಿತ್ತು. ಇದೇ ಕೆರೆಯ ಮಣ್ಣಿಂದ ಮನೆಗೆ ಕಟ್ಟಲು ಇಟ್ಟಿಗೆಯನ್ನು ತಯಾರಿಸಲು ಬಳಸ್ತಾ ಇದ್ದರು. ಆದರಿಂದ ಈ ಕೆರೆ ಮತ್ತಷ್ಟು ಆಳವಾಗುತ್ತಾ ಹೋಯಿತಂತೆ. ನೀರು ಹೆಚ್ಚು ಶೇಖರಣೆ ಕೂಡ ಆಯಿತು. ಇಲ್ಲಿ ಹಿರಿಯರು ಹೇಳುವ ಪ್ರಕಾರ ಬೇಸಿಗಾಲ ಇದ್ರೂ ಕೂಡ ಮೇ ಯವರೆಗೆ ಇಲ್ಲಿ ಗದ್ದೆಗೆ ನೀರು ಕೊರತೆ ಯಾಗ್ತಿರ್ಲಿಲ್ಲವಂತೆ. ಅಲ್ಲಿನ ಸ್ಥಳೀಯರಾದ ಜೋಸೆಫ್ ರೆಬೆಲ್ಲೋ ಹೇಳುವಂತೆ, ಆಧುನೀಕರಣ ಮತ್ತು ನಗರೀಕರಣದ ಭರಾಟೆಯನ್ನು ಪರಿಸರ ಸ್ವಚ್ಚತೆ ಹಾಗೂ ಸೌಂದರ್ಯವನ್ನು ಹಾಳು ಮಾಡುತ್ತಿದ್ದಾರೆ. ಅಲ್ಲದೆ ಇಲ್ಲಿ ಬೇಸಾಯವನ್ನೇ ಮಾಡುತ್ತಿಲ್ಲ ಹಾಗಾಗಿ ನೀರು ಕೂಡ ಬಳಕೆಯಾಗುತ್ತಿಲ್ಲ. ಸುಮಾರು ೩೦ ವರ್ಷಗಳ ಹಿಂದೆ ಈ ಕೆರೆಯ ನೀರು ಪರಿಶುದ್ದವಾಗಿದ್ದು, ತುಂಬಿ ಹರಿಯುತ್ತಿತ್ತು. ಆದರೆ ಕ್ರಮೇಣ ಅಲ್ಲಿನ ಗ್ರಾಮಸ್ಥರು ನೀರು ಹರಿಯದಂತೆ ಅಲ್ಲಲ್ಲಿ ತಡೆಯೊಡ್ಡಿದ್ದಾರೆ. ಈ ಕೆರೆಯ ಸುತ್ತಲೂ ಮರ-ಗಿಡಗಳೂ ಇವೆ, ಆದರೆ, ಗ್ರಾಮಸ್ಥರ ಅಸಡ್ಡೆಯಿಂದ ಈ ಕೆರೆಯನ್ನು ಮೂಲೆಗುಂಪು ಮಾಡಲಾಗಿದೆ. ಅಲ್ಲದೆ, ಜೀರ್ಣೋದ್ದಾರದಂತಹ ಯಾವುದೇ ಕೆಲಸಗಳು ಇಲ್ಲಿ ಆಗಿಲ್ಲ, ಹೂಳೆತ್ತುವ ಕೆಲಸ ಕೂಡಾ ಆಗ್ತಿಲ್ಲ. ಹಾಗಾಗಿ ನೀರು ತುಂಬಿ ಕೊಂಡು ಕೊಳಕಾಗಿದೆ. ಇದೇ ಕೆರೆಯ ಹತ್ತಿರ ಕುಡಿಯುವ ಶುದ್ದ ನೀರಿಗಾಗಿ ಭಾವಿ ನಿರ್ಮಾಣ ಮಾಡಲಾಗಿತ್ತು ಆದರೆ, ಅದರಿಂದ ಕಲ್ಲು ಬಂದಿದ್ದರಿಂದಾಗಿ ಹಾಗೇಯೆ ಬದಿಗೆ ಸರಿಸಿ ಬಿಟ್ಟರು. ಈ ಅದರಲ್ಲೂ ಕೊಳಕು ನೀರು ತುಂಬಿದೆ. ಸ್ಥಳೀಯ ಪಂಚಾಯತ್ ಸದಸ್ಯರು ಈ ಕೆರೆಯ ಅಭಿವೃದ್ದಿ ಬಗ್ಗೆ ಸರಕಾರಕ್ಕೆ ಮನವಿ ನೀಡಿದ್ದು, ಸುಮಾರು ರೂ 2.5 ಕೋಟಿ ವೆಚ್ಚದ ಕ್ರಿಯಾ ಯೋಜನೆ ಮಾಡಲಾಗಿತ್ತು. ಇದನ್ನು ಮಂತ್ರಿಗಳು ಆಸ್ಥೆ ವಹಿಸಿ ಅಭಿವೃದ್ಧಿ ಪಡಿಸಿದರೆ ಇಲ್ಲಿನ ಸ್ಥಳೀಯರಿಗೆ ಒಂದು ಉತ್ತಮ ನೀರಿನ ಮೂಲ ಸಿಕ್ಕಂತಾಗುತ್ತದೆ. ಬಹುಶಃ ಈ ಕೆರೆಯನ್ನು ಸರಕಾರ ಅಥವಾ ನಗರ ಅಭಿವೃಧ್ದಿ ಪ್ರಾಧಿಕಾರ ಗಣನೆಗೆ ತೆಗೆದು ಜೀರ್ಣೋದ್ಧಾರದ ಕೆಲಸವನ್ನ ಕೈಗೆತ್ತಿ ಕೊಂಡರೆ ಇದು ಮುಂದೆ ಗ್ರಾಮಕ್ಕೆ ಜೀವಜಲವಾಗ ಬಹುದು.
ಪೊಟ್ಟು ಕೆರೆ- ಇನ್ನೊಂದು ಕಥೆ
ಇದೇ ಗೋಪಾಪುರ ವಾರ್ಡ್ನಲ್ಲಿ ಕಂಡು ಬರುವ ಒಂದು ಬರಿದಾದ ಕೆರೆ. ಹಾಗಾಗಿ ಏನೋ ಪೊಟ್ಟು ಕೆರೆ ಎಂದೇ ಸ್ಥಳೀಯರು ಕರೆಯುತ್ತಾರೆ. ಈ ಜಾಗ ಕಂದಾಯ ಇಲಾಖೆಗೆ ಸೇರಬೇಕೋ ಅಥವಾ ನೀರಾವರಿ ಇಲಾಖೆಗೋ ಎನ್ನುವ ಗೊಂದಲ ಇಂದಿಗೂ ಇದೆ. ಪಂಚಾಯತ್ ನಲ್ಲಿ ನೀರವರಿ ಇಲಾಖೆಗೆ ಸೇರಬೇಕಿದೆ ಎಂಬುದಕ್ಕೆ ದಾಖಲೆಗಳಿವೆ.ಇದರಲ್ಲಿಯೂ ಹಿಂದೆ ಜನವರಿ- ಪೆಭ್ರವರಿ ಯವರೆಗೆ ಎಥೇಚ್ಚ ನೀರು ಇತ್ತು ಹಾಗಾಗಿ ಕೃಷಿ ಭೂಮಿಗಳಿಗೆ ನೀರಿನ ಕೊರತೆ ಇರಲಿಲ್ಲ. ಕೊನೆಗೆ ಇಲ್ಲಿ ಹೂಳು ತುಂಬಿ ಕೆರೆ ಶಿಥಿಲಾವಸ್ಥೆಯನ್ನು ಕಂಡಿತು.ಇನ್ನು ಇದರ ಸುತ್ತಲೂ ಕೆಲವು ಮನೆಗಳಿಗೆ ಜಾಗದ ಗೊಂದಲದಿಂದಾಗಿ, ಇದುವರೆಗೆ ಹಕ್ಕು ಪತ್ರವೇ ಸಿಕ್ಕಿಲ್ಲವಂತೆ, ಅಲ್ಲದೆ ಮೂಲಸೌಕರ್ಯದ ಕೊರತೆಯೂ ಇದೆ. ಈ ಬಾರಿ ಚುನಾವಣೆಯ ನಂತರವಾದರೂ ಹಕ್ಕು ಪತ್ರ ಸಿಗಬಹುದೇನೋ ಎನ್ನುವ ಭರವಸೆಯಲ್ಲಿದ್ದಾರೆ.
ಸುಮಾರು ಈ ಕೆರೆ 2.5 ಎಕರೆ ಜಾಗದಷ್ಟು ವಿಸ್ತಾರವಾಗಿದ್ದು, ಕೆರೆಯ ಸುತ್ತ ಗೋಡೆ ನಿರ್ಮಿಸಿ, ವಾಕಿಂಗ್ ಟ್ರಾಕ್ ಹಾಗೂ ಕೂರಲು ಬೆಂಚುಗಳನ್ನು ಹಾಕಿ ಅಭಿವೃದ್ಧಿ ಪಡಿಸಿದರೆ ಆ ಭಾಗದ ಜನರಿಗೆ ಸಂಜೆಯನ್ನು ಕಳೆಯಲು ಒಂದು ಉತ್ತಮ ಸ್ಥಳ ಎನ್ನುತ್ತಾರೆ, ಅಲ್ಲಿನ ಸ್ಥಳೀಯರಾದ ಉಮೇಶ್ ಶೆಟ್ಟಿ.ಇನ್ನೊಂದು ಅಚ್ಚರಿಯ ಸಂಗತಿ ಎಂದರೆ ಈ ಕೆರೆಯಲ್ಲಿ ನೀರು ನಿಲ್ಲಿಸಿದರೆ ಹತ್ತಿರದ ಬಾವಿಗಳಲ್ಲಿ ಸದಾ ನೀರು ಇರುತ್ತದೆಯಂತೆ. ಇಲ್ಲಿನ ನೀರು, ಕೊಳವೆ ಮೂಲಕ ಸುಮಾರು ಒಂದು ಕಿ,ಮೀ ಉದ್ದದ ವರೆಗೆ ಕ್ರಮಿಸುತ್ತಿತ್ತು. ಕ್ರಮೇಣ ಇಲ್ಲಿ ಸುತ್ತ ಮುತ್ತ ಜಾಗದ ಕೊರತೆಯಿಂದ ಮತ್ತು ಅಲ್ಲಲ್ಲಿ ಅಡ್ಡಲು ಹಾಕಿದ್ದರಿಂದ ನೀರು ನಿಲ್ಲುವುದು ಕಡಿಮೆಯಾಯ್ತು. ಇನ್ನು ಕೃಷಿಕರ ಸಂಖ್ಯೆಯೂ ಕಡಿಮೆಯಾಗುತ್ತಿರುವುದರಿಂದ ಈ ಕೆರೆಯನ್ನು ಉಳಿಸಿಕೊಳ್ಳುವ ಗೋಜಿಗೆ ಯಾರೂ ಹೋಗಿಲ್ಲ.ಸದ್ಯಕ್ಕೆ ಈ ಪೊಟ್ಟುಕೆರೆಯನ್ನು ಮುಚ್ಚಿ ಕಟ್ಟಡಗಳನ್ನು ಕಟ್ಟುವ ಹುನ್ನಾರ ಅನೇಕರಿಂದ ನಡೀತಾ ಇದೆ. ಆದ್ರೆ ಜಾಗದ ಬಗ್ಗೆ ಗೊಂದಲವಿರುವುದರಿಂದ ಏನೂ ಅಭಿವೃದ್ದಿ ಕಾರ್ಯ ನಡೆಯುತ್ತಿಲ್ಲ. ಈ ಕೆರೆಯಾಗಿಯೇ ಶಾಶ್ವತವಾಗಿ ಉಳಿಯಬೇಕು ಎನ್ನುವುದು ಗ್ರಾಮಸ್ಥರ ಬೇಡಿಕೆಈ ಎರಡು ಕೆರೆಯನ್ನು ನೋಡಿದಾಗ ನೀರಿನ ಒರತೆಗಳು ಹೇಗೆ ಒಂದೊಂದೇ ನೆಲೆ ಕಚ್ಚುತ್ತಿವೆ. ಇದರ ಅಭಿವೃದ್ಧಿ ಹೇಗೆ ಸಾದ್ಯ? ಇತ್ತಿಚೇಗೆ ಮಳೆಯ ಪ್ರಮಾಣ ಕಡಿಮೆಯಾಗಿ, ಉಷ್ಣಾಂಶ ಜಾಸ್ತಿಯಾಗುತ್ತಿದೆ. ಹಾಗಾಗಿ ಮಳೆಕೊಯ್ಲು ಕಾರ್ಯಕ್ರಮದಡಿಯಲ್ಲಿ ಇದನ್ನು ಅಭಿವೃದ್ಧಿ ಪಡಿಸಿದರೆ, ಆ ಜಾಗದ ಜನರಿಗೆ ಶಾಶ್ವತ ನೀರಿನ ಒರತೆ ಸಿಕ್ಕಂತಾಗುತ್ತದೆ.