ಕಾರ್ಕಳ, ಸೆ 27 (Daijiworld News/MSP): ಗಾಂಧೀಜಿ 150 - ಸ್ವಚ್ಛತೆಗೆ ಸ್ವಲ್ಪ ಹೊತ್ತು ಎಂಬ ಶೀರ್ಷಿಕೆಯಡಿ ರಾಷ್ಟ್ರಪಿತ ಮಹಾತ್ಮ ಗಾಂಧಿಯವರ 150 ನೇ ಜನ್ಮದಿನಾಚರಣೆ ಸಂಕಲ್ಪಕ್ಕೆ ಶಾಸಕ ಸುನೀಲ್ಕುಮಾರ್ ಅವರ ಮನೆಯಿಂದಲೇ ಚಾಲನೆ ದೊರೆಯಿತು.
ಶಾಸಕ ವಿ.ಸುನೀಲ್ ಮನೆಯ ವಠಾರದಲ್ಲಿ ಸ್ವಚ್ಚತಾ ಕಾರ್ಯದಲ್ಲಿ ಖುದ್ದಾಗಿ ಪಾಲ್ಗೊಂಡಿದ್ದರು. ಅದಕ್ಕೆ ಪತ್ನಿ ಮಕ್ಕಳು, ತಂದೆ,ತಾಯಿ, ಸಂಬಂಧಿಕರು ಸಾಥ್ ನೀಡಿದರು. ಶಾಸಕರ, ನಮ್ಮ ಪರಿಸರದ ಕನಿಷ್ಠ 150 ಮೀಟರ್ ಪರಿಸರವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು ಮುಂಡ್ಕೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್ಲಾ ಸಿಬ್ಬಂದಿಗಳು ಆಸ್ಪತ್ರೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೆಯ ಸಂಕಲ್ಪ ಮಾಡಿದರು ಅಲ್ಲದೆ ಜೋಡುರಸ್ತೆಯ ಪಂಚಮಿ ರೆಸಿಡೆನ್ಸಿಯ ಎಲ್ಲಾ ನಿವಾಸಿಗಳು ಸೇರಿ ಸ್ವಯಂಪ್ರೇರಿತರಾಗಿ ಸ್ವಚ್ಚತೆಯ ಸಂಕಲ್ಪ ಮಾಡುವ ಮೂಲಕ ಜೊತೆಗೆ ಶಿವಪುರ ನಾಗರಿಕರು ಶಿವಪುರ ಪೇಟೆಯಲ್ಲಿ ಒಟ್ಟಾಗಿ ಸಂಕಲ್ಪ ಮಾಡುವ ಮೂಲಕ ಸ್ವಚ್ಚತಾ ಸಂಕಲ್ಪ ಮಾಡಿದರು.
ಅಂದು ಸ್ವಚ್ಚ ಭಾರತದ ಕನಸು ಕಂಡ ಮಹಾತ್ಮಾ ಗಾಂಧಿ ಇಂದು ಅದನ್ನು ನನಸು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಸಂಕಲ್ಪವನ್ನು ಸಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳು ಶಿಕ್ಷಣ ಸಂಸ್ಥೆಗಳು, ಪ್ರಾಂಶುಪಾಲರುಗಳು, ಗಣ್ಯರು, ವೈದ್ಯರುಗಳು ಬೆಂಬಲ ಸೂಚಿಸಿದ್ದಾರೆ.