ಕಾರ್ಕಳ, ಸೆ 27(DaijiworldNews/SM): ಮತಾಂತರ ವಿರುದ್ಧ ಸಿಡಿದೆದ್ದ ಬಜರಂಗದಳ ತೀವ್ರ ಹೋರಾಟಕ್ಕೆ ಸಜ್ಜಾಗಿದ್ದು, ಸಪ್ಪೆಂಬರ್ 29ರಂದು ಬೆಳ್ಮಣ್ ಪರಿಸರದಲ್ಲಿ ಬೃಹತ್ ಪ್ರತಿಭಟನಾ ಸಭೆ ನಡೆಸಲು ನಿರ್ಧರಿಸಿದೆ.
ಈ ಪ್ರತಿಭಟನಾ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವ ಸಂಘದ ಪ್ರಮುಖ ಕಲ್ಲಡ್ಕ ಪ್ರಭಾಕರ ಭಟ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಬಜರಂಗ ದಳ ಉಡುಪಿ ಜಿಲ್ಲಾ ಸುರಕ್ಷ ವಿಭಾಗ ಪ್ರಮುಖ ಮಹೇಶ್ ಬೈಲೂರು ಹೇಳಿದರು.
ಕಾರ್ಕಳದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಳ್ಮಣ್ ಚಲೋ ಎಂಬ ಹೆಸರಿನೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಅದರ ಕಾವು ಎಲ್ಲೆಡೆಯಲ್ಲಿ ಕಂಡುಬರಲಿದೆ. ಸಂಘ ಪರಿವಾರದ ಪ್ರಮುಖ ಸೂರ್ಯನಾರಾಯಣ ಅವರ ನೇತೃತ್ವದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತಾಂತರ ವಿರುದ್ಧ ಜನಜಾಗೃತಿ ನಡೆಸುತ್ತಿರುವ ಭಾಗವಾಗಿ ಹೋರಾಟ ನಡೆಸಲಾಗುತ್ತಿದೆ.
ಸಂಘದ ಪರಿವಾರದ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇರುವುದರಿಂದ ಮತಾಂತರ ನಿಷೇಧ ಕಾಯಿದೆ ಜಾರಿಗೆ ತರುವುದಕ್ಕೆ ಅನುಕೂಲವಾಗಿದೆ. ಭಾರತದ ಸಂವಿಧಾನದಡಿಯಲ್ಲಿ ಕಾನೂನು, ಹಕ್ಕುಗಳು ರಚನೆಗೊಂಡಿದೆ. ಈ ನಡುವೆ ಮತಾಂತರ ನಿಷೇಧ ಕಾಯಿದೆ ತರಲು ಕೇಂದ್ರ ಸರಕಾರವು ಚಿಂತನೆ ನಡೆಸಿದೆ. ಸಂಘದ ಪರಿವಾರದ ಸರಕಾರ ಕೇಂದ್ರದಲ್ಲಿ ಇದ್ದು, ಗೃಹ ಸಚಿವ ಅಮಿತ್ ಷಾ ಅವರು ಮತಾಂತರ ನಿಷೇಧ ಕಾಯಿದೆ ತರುವುದಾಗಿ ಅಮಿತ್ ಷಾ ಹೇಳಿರುವುದನ್ನು ಉಲ್ಲೇಖಿಸಿದರು.