ಮಂಗಳೂರು ಜ 1 : ಕರಾವಳಿಯಲ್ಲಿ ಲವ್ ಜಿಹಾದ್ ವಿರುದ್ದ ದ್ವನಿ ಎತ್ತುತ್ತಿರುವ ಹಿಂದೂ ಸಂಘಟನೆಗಳ ಮುಖಂಡರೊಬ್ಬರ ಪುತ್ರಿಯೇ ಫೇಸ್ ಬುಕ್ ನಲ್ಲಿ ಪರಿಚಯವಾದ ಅನ್ಯ ಕೋಮಿನ ಯುವಕನೊಂದಿಗೆ ಪರಾರಿಯಾಗಿ ವಿವಾಹವಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಬಜರಂಗದಳ ಕೇಂದ್ರದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವ್ರಿಗೂ ದೂರು ನೀಡೋ ಮೂಲಕ ಪ್ರಕರಣ ಗಂಭೀರತೆ ಪಡೆದುಕೊಂಡಿದೆ.
ಘಟನೆಯ ವಿವರ :
ನಗರದ ಎಸ್ ಡಿ ಎಂ ಕಾನೂನು ಕಾಲೇಜಿನಲ್ಲಿ ಅಂತಿಮ ಕಾನೂನು ಪದವಿ ಅಭ್ಯಾಸಿಸುತ್ತಿರುವ ವಿದ್ಯಾರ್ಥಿನಿ ರೇಷ್ಮಾ (23) ಕಾಸರಗೋಡು ಮೂಲದ ಪ್ರಭಾವಿ ಹಿಂದೂ ಮುಖಂಡ ಮಗಳಾಗಿದ್ದು ತನ್ನ ಹೆತ್ತವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಳು. ಆದರೆ ಸುಮಾರು ಆರು ವರ್ಷಗಳ ಹಿಂದೆಯೇ ಫೇಸ್ ಬುಕ್ ನಲ್ಲಿ ಇಕ್ಬಾಲ್ ಎನ್ನುವ ಯುವಕನ ಪರಿಚಯವಾಗಿದ್ದು ಬಳಿಕ ಪರಿಚಯ ಪ್ರೀತಿಗೆ ತಿರುಗಿದೆ. ಹೀಗಾಗಿ ಕೆಲ ತಿಂಗಳ ಹಿಂದೆ ಆತನ ಜೊತೆ ಪರಾರಿಯಾಗಿ ಮುಂಬೈನಲ್ಲಿ ಇಕ್ಬಾಲ್ ಜೊತೆಗೆ ಆಕೆಯ ವಿವಾಹವಾಗಿದ್ದಾಳೆ ಎನ್ನಲಾಗಿದೆ.
ಆದರೆ ಸದ್ಯ ಆಕೆಯನ್ನ ಮಂಗಳೂರಿಗೆ ಕರೆ ತರಲಾಗಿದೆ ಎನ್ನಲಾಗಿದೆ ಆದ್ರೆ ಆಕೆಯ ಪ್ರಿಯಕರ ಇಕ್ಬಾಲ್ ಈ ಬಗ್ಗೆ ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ ಬೆನ್ನಲ್ಲೇ ಇದೀಗ ಯುವತಿ ತಾನು ಹೆತ್ತವರ ಜೊತೆಗೆ ಇಚ್ಚೆಯನುಸಾರವೇ ಬಂದಿರೋದಾಗಿ ಅಫಿಡವಿಟ್ ಸಲ್ಲಿಸಿದ್ದು, ಮಹಾರಾಷ್ಟ್ರ ಪೊಲೀಸ್ ಇಲಾಖೆಗೂ ತಲುಪಿಸಲಾಗಿದೆ ಎಂದು ತಿಳಿದು ಬಂದಿದೆ.
ಕರಾವಳಿಯಲ್ಲಿ ಮೂಡಬಿದ್ರೆ ಪ್ರಿಯಾಂಕ ಹಾಗೂ ಇತರ ಹಲವಾರು ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಹಿಂದೂ ಮುಖಂಡರೊಬ್ಬರ ಪುತ್ರಿಯೇ ಲವ್ ಜಿಹಾದ್ ಗೆ ಸಿಲುಕಿರೋದು ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಈ ಘಟನೆ ಹೊರಬರುತ್ತಿದ್ದಂತೆಯೇ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಭಾರೀ ಪ್ರತಿಭಟನೆಗೆ ಸಿದ್ಧತೆ ನಡೆಸಿದೆ.ಸದ್ಯ ಯುವತಿ ಎಲ್ಲಿದ್ದಾಳೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ. ಆದ್ರೆ ಇಕ್ಬಾಲ್ ದೂರಿನಂತೆ ಮಹಾರಾಷ್ಟ್ರ ಪೊಲೀಸರು ಮಂಗಳೂರಿಗೆ ಆಗಮಿಸಿದ್ದಾರೆ ಎನ್ನಲಾಗಿದೆ.
ಸಂತ್ರಸ್ತೆ
ಅಫಿಡವಿಟ್ ನ ಪ್ರತಿ
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಅವರಿಂದ ಮನವಿ ಸ್ವೀಕಾರ