ಕಾಸರಗೋಡು, ಸೆ 28 (DaijiworldNews/SM):ತಾಯಿಯನ್ನೇ ಕೊಲೆಗೈದ ಪಾಪಿ ಪುತ್ರನಿಗೆ ಜೀವಾವಧಿ ಶಿಕ್ಷೆ ಹಾಗೂ 75 ಸಾವಿರ ರೂಪಾಯಿ ದಂಡ ವಿಧಿಸಿ ಕಾಸರಗೋಡು ಜಿಲ್ಲಾ ಹೆಚ್ಚುವರಿ ನ್ಯಾಯಾಲಯ ಆದೇಶ ನೀಡಿದೆ.
ಕಾಸರಗೋಡು ಚೌಕಿ ಅಜಾದ್ ನಗರದ ಪದ್ಮಾವತಿ(60) ಎಂಬವರನ್ನು ಆಕೆಯ ಪುತ್ರನೇ 2015ರ ಮೇ 18 ರಂದು ಕೊಲೆಗೈದಿದ್ದ. ಅನಿಲ್ ಕುಮಾರ್(38) ಕೊಲೆಗೈದ ಪಾಪಿ ಪುತ್ರನಾಗಿದ್ದಾನೆ. ಈತನ ನೀಚ ಕೃತ್ಯಕ್ಕೆ ಕೋರ್ಟ್ ಇದೀಗ ಆತನಿಗೆ ಶಿಕ್ಷೆ ವಿಧಿಸಿದೆ.
2015ರ ಮೇ 18 ರಂದು ಮಧ್ಯಾಹ್ನ 12.30ರ ಸುಮಾರಿಗೆ ಕುಂಬಳೆ ಬಸ್ಸು ನಿಲ್ದಾಣ ಪರಿಸರದಲ್ಲಿ ಆರೋಪಿ ಅನಿಲ್ ಕುಮಾರ್ ತಾಯಿ ಪದ್ಮಾವತಿಯನ್ನು ಇರಿದು ಕೊಲೆಗೈದಿದ್ದ. ಆಸ್ತಿ ವಿವಾದದ ಕಾರಣದಿಂದ ಕೃತ್ಯ ನಡೆಸಿದ್ದ ಎಂದು ಆರೋಪಿಸಲಾಗಿದೆ.