ಮಂಗಳೂರು ಜ 2: ಇತ್ತೀಚೆಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜಿಪಿಗೆ ಸೇರ್ಪಡೆಗೊಂಡ ಹರಿಕೃಷ್ಣ ಬಂಟ್ವಾಳರನ್ನು ಜ 1ರ ಸೋಮವಾರ ನಗರದಲ್ಲಿ ನಡೆದ ಪತ್ರಿಕಾ ಗೋಷ್ಟಿಯೊಂದರಲ್ಲಿ ಪತ್ರಕರ್ತರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ಇತ್ತೀಚೆಗೆ ಸಾರ್ವಜನಿಕ ಸಭೆಯೊಂದರ ವೇದಿಕೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಜನಾರ್ಧನ ಪೂಜಾರಿಯವರು ಭಾವುಕರಾಗಿ ಕಣ್ಣೀರಿಟ್ಟಿದ್ದರು.ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳುಗಳ ಹಿಂದೆ ಪೂಜಾರಿಯವರಿಗೆ ಆಡಿದ ನಿಂದನೆಯ ಮಾತುಗಳು ಅವರ ಕಣ್ಣೀರಿಗೆ ಕಾರಣ ಎಂದು ಹರಿಕೃಷ್ಣ ಬಂಟ್ವಾಳ ಆರೋಪಿಸಿದ್ದರು. ಈ ಬಗ್ಗೆ ಅವರು ಇದೇ ವಿಷಯವನ್ನಿಟ್ಟುಕೊಂಡು ಈ ಹಿಂದೆಯೂ ಪತ್ರಿಕಾಗೋಷ್ಟಿಗಳನ್ನು ನಡೆಸಿದ್ದರು.ಇದಕ್ಕೆ ಪ್ರತಿಕ್ರಿಯೆ ನೀಡಿದ ರಮಾನಾಥ ರೈಯವರು ಕಣ್ಣೀರಿಟ್ಟು ತಾನು ಪೂಜಾರಿಯವರಿಗೆ ಯಾವುದೇ ಮಾತುಗಳಿಂದ ನಿಂದಿಸಲಿಲ್ಲ. ಈ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಣೆಗೂ ಸಿದ್ಧನಿದ್ದೇನೆ ಎಂದು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.
ಬಿ.ಸಿ ರೋಡ್ ನಲ್ಲಿ ನಡೆಸ ಸಮಾರಂಭದಲ್ಲಿ ರಮಾನಾಥ ರೈ ಸುರಿಸಿದ್ದು ಮೊಸಳೆ ಕಣ್ಣೀರು, ಇದೀಗ ಪೂಜಾರಿಯವರ ಮನೆಯವರನ್ನು ಈ ಪ್ರಕರಣಕ್ಕೆ ಕರೆತರುವ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬೈದಿರುವ ವಿಚಾರವನ್ನು ನಾನೇ ಸೃಷ್ಟಿಸಿರುವ ಆರೋಪ ನನ್ನ ಮೇಲಿದೆ. ಆದರೆ ಈ ವಿಚಾರವನ್ನು ನನಗೆ ತಿಳಿಸಿದ್ದು ಪೂಜಾರಿ ಅವರೇ. ಸಾಮಾನ್ಯವಾಗಿ ಪೂಜಾರಿ ಕಣ್ಣೀರು ಹಾಕುವವರಲ್ಲ , ಗಟ್ಟಿ ಸ್ವಭಾವದ ಪೂಜಾರಿ ಇಂದಿರಾ ಗಾಂಧಿ , ರಾಜೀವ್ ಗಾಂಧಿ, ನರಸಿಂಹ ರಾವ್ ಹೀಗೆ ಮೂರು ಜನ ಪ್ರಧಾನಿಗಳ ಬಳಿ ಕೆಲಸ ಮಾಡಿದ್ದಾರೆ. ವಿಪಕ್ಷದಲ್ಲಿರುವ ಸಂಸದ ನಳೀನ್ ಕುಮಾರ್ ಕಟೀಲು ಕೂಡಾ ಪೂಜಾರಿ ಅವರ ಕಾಲಿಗೆ ಬಿದ್ದು ಗೌರವ ಸೂಚಿಸುತ್ತಾರೆ ಎಂದರು.
ಮಾಧ್ಯಮಗಳಿಗೆ ಎಲ್ಲಾ ವಿವರಣೆಯ ನೀಡಿದ ಬಳಿಕ ಪತ್ರಕರ್ತರು ನೇರವಾಗಿ ಹರಿಕೃಷ್ಣ ಬಂಟ್ವಾಳ್ ಅವರನ್ನು ತರಾಟೆಗೆ ತೆಗೆದುಕೊಂಡು, ಜನಾರ್ದನ ಪೂಜಾರಿ ಮತ್ತು ರಮಾನಾಥ ರೈ ಮದ್ಯೆ ಎದ್ದಿರುವ ಈ ವಿವಾದವನ್ನು ನೀವೆ ಮತ್ತೆ ಮತ್ತೆ ಪ್ರಸ್ತಾಪಿಸಿ ವಿವಾದ ತಣ್ಣಾಗಾಗಲು ಬಿಡುತ್ತಿಲ್ಲ ಏಕೆ ಎಂದು ಕಿಡಿಕಾರಿದರು.
"ನೀವು ಕಾಂಗ್ರೆಸ್ ನಲ್ಲಿರುವಾಗ, ನಿಮಗೆ ರೈ ವಿರುದ್ದ ಯಾವುದೇ ತಕರಾರು ಇರಲಿಲ್ಲ, ಇದೀಗ ಬಿಜೆಪಿ ಸೇರ್ಪಡೆಗೊಂಡ ನಂತರ, ನೀವು ಅದನ್ನು ಸ್ಫೋಟಿಸುತ್ತಿದ್ದೀರಿ. ಇದು ಎರಡು ಕಾಂಗ್ರೆಸ್ ಮುಖಂಡರ ನಡುವಿನ ಸಮಸ್ಯೆ ಮಾತ್ರವೇ? "ಅವರು ಕೇಳಿದರು. ಪತ್ರಕರ್ತರ ತೀಕ್ಷ್ನ ಪ್ರಶ್ನೆಗಳನ್ನು ತಪ್ಪಿಸಲು ಹರಿಕೃಷ್ಣ ಸಮಧಾನಕರ ಉತ್ತರ ನೀಡಲು ಪ್ರಯತ್ನವನ್ನು ಮಾಡಿದರು, ಆದರೆ ಮಾಧ್ಯಮದವರು ಧರ್ಮಸ್ಥಳದಲ್ಲಿ ಶಪಥ ಮಾಡುವ ವಿಚಾರವನ್ನು ತೆಗೆದುಕೊಂಡು ತನ್ನ ರಾಜಕೀಯ ಲಾಭಕ್ಕಾಗಿ ಸಮಸ್ಯೆಯನ್ನು ಉಪಯೋಗಿಸುವುದನ್ನು ನಿಲ್ಲಿಸಬೇಕೆಂದು ಪತ್ರಕರ್ತರು ಒತ್ತಾಯಿಸಿದರು.