ಮಂಗಳೂರು, ಸೆ 29 (Daijiworld News/MSP): ರಾಜ್ಯಾದ್ಯಂತ ಇಂದಿನಿಂದ ನವರಾತ್ರಿ ಆಚರಣೆಯ ಸಂಭ್ರಮ. ಇದಕ್ಕೆ ತುಳುನಾಡು ಕೂಡಾ ಸಿದ್ದವಾಗಿದ್ದು, ಮಂಗಳೂರು ದಸರಾ ಸಂಭ್ರಮಕ್ಕೆ ಅದ್ದೂರಿ ಚಾಲನೆ ಸಿಕ್ಕಿದೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ವತಿಯಿಂದ ನವರಾತ್ರಿ ಉತ್ಸವ ಮತ್ತು ದಸರಾ ಸಂಭ್ರಮಕ್ಕೆ ಪೊಲೀಸ್ ಆಯುಕ್ತ ಡಾ.ಪಿ.ಎಸ್. ಹರ್ಷ ಚಾಲನೆ ನೀಡಿದ್ದಾರೆ.






























ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಪಿ.ಎಸ್. ಹರ್ಷ, “ಮಂಗಳೂರು ದಸರಾವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ ಮತ್ತು ದಸರಾ ಸುಗಮವಾಗಿ ಸಾಗಲು ಸಕಲ ವ್ಯವಸ್ಥೆಯನ್ನು ಮಾಡಲಾಗಿದೆ” ಎಂದು ಹೇಳಿದರು.
ಪ್ರತಿಷ್ಟಾಪನೆಯ ಶಾರದಾ ವಿಗ್ರಹವನ್ನು ಮೆರವಣಿಗೆಯಲ್ಲಿ ಭವ್ಯವಾಗಿ ಬ್ಯಾಂಡ್ಗಳು ಮತ್ತು ಹುಲಿ ವೇಷಾ ಮೆರವಣಿಗೆಯಲ್ಲಿ ಮುನ್ನಡೆಸಿದರು. ವಿವಿಧ ಆಚರಣೆಗಳನ್ನು ನಡೆಸಿ ಶಾರದ ವಿಗ್ರಹವನ್ನು ಸ್ಥಾಪಿಸಲಾಯಿತು. ನವ ಶಕ್ತಿಗಳ ವಿಗ್ರಹಗಳನ್ನು ಆದಿಶಕ್ತಿ, ಶೈಲಾ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಂಡಿನಿ, ಸ್ಕಂದಮಠ, ಕ್ಯಾತ್ಯಾಯಿನಿ, ಮಹಾಗೌರಿ ಮತ್ತು ಸಿದ್ದಧಾತ್ರಿಗಳಲ್ಲಿ ಸ್ಥಾಪಿಸಲಾಗಿದೆ.
ಸೆ 30ರಂದು ದುರ್ಗಾ ಹೋಮ, ಅ.1ರಂದು ಬೆಳಗ್ಗೆ ಆರ್ಯ ದುರ್ಗಾ ಹೋಮ, 2ರಂದು ಭಗವತಿ ದುರ್ಗಾ ಹೋಮ, 3ರಂದು ಕುಮಾರಿ ದುರ್ಗಾ ಹೋಮ, 4ರಂದು ಅಂಬಿಕಾ ದುರ್ಗಾ ಹೋಮ, 5ರಂದು ಮಹಿಷ ಮರ್ದಿನಿ ದುರ್ಗಾ ಹೋಮ, 6ರಂದು ಚಂಡಿಕಾ ಹೋಮ, 7ರಂದು ಸರಸ್ವತಿ ದುರ್ಗಾ ಹೋಮ, 8ರಂದು ವಾಗೀಶ್ವರಿ ದುರ್ಗಾ ಹೋಮಗಳು ನಡೆಯಲಿವೆ. 8ರಂದು ಸಂ.4 ಗಂಟೆಗೆ ದಸರಾ ಶೋಭಾಯಾತ್ರೆ ಆರಂಭ ವಾಗಲಿದೆ. 9ರಂದು ಬೆ.4 ಗಂಟೆಗೆ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ ನಡೆದು ಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.