ಪುತ್ತೂರು ಸೆ 29(Daijiworld News/MSP): ತಾಲ್ಲೂಕಿನ ಪಾಣಾಜೆ ಗ್ರಾಮದ ಎಣ್ಣೆ ಗದ್ದೆ ನಿವಾಸಿ ಅಬ್ದುಲ್ ಅಜೀಜ್ (65) ಪರವಾನಿಗೆ ಪಡೆದ ಗನ್ ಹೊಂದಿದ್ದಾನೆ. ಸೆಪ್ಟೆಂಬರ್ 27 ರಂದು ರಾತ್ರಿ 10.45 ರ ಸುಮಾರಿಗೆ ಬಂದೂಕಿನ ಮದ್ದುಗುಂಡುಗಳು ಆಕಸ್ಮಿಕವಾಗಿ ಕೆಳಗೆ ಬಿದ್ದು ಮನೆಯಲ್ಲಿ ಸಣ್ಣ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಅಬ್ದುಲ್ ಖಲೀಲ್ ಮತ್ತು ಸಿನಾನ್ ಅವರ ಕೈ ಕಾಲುಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ ಅಲ್ಲದೆ ಬಂದೂಕಿನ ಪರವಾನಗಿ ಹೊಂದಿರುವ ಅಬ್ದುಲ್ ಅಜೀಜ್ ಅವರು ಅಸುರಕ್ಷಿತವಾಗಿ ಬಂದೂಕನ್ನು ಇಟ್ಟುಕೊಂಡಿರುವುದೇ ಈ ಘಟನೆಗೆ ಕಾರಣ ಎಂಬ ಪ್ರಾಥಮಿಕ ತೀರ್ಮಾನಕ್ಕೆ ಬಂದಿದ್ದಾರೆ. ಹೀಗಾಗಿ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.