ಉಳ್ಳಾಲ, ಸೆ 30 (Daijiworld News/MSP): ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಸಂಘಟನೆಯ ವಿರುದ್ದ ಅವಹೇಳನಕಾರಿಯಾಗಿಯಾಘಿ ಬರಹ ಪ್ರಕಟಿಸಿದ ಪಾವೂರಿನ ಮೊಹಮ್ಮದ್ ಮಯ್ಯದ್ದಿ ಎಂಬಾತನಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಭಾರತದಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಘಟನೆ ಮುಂದಿಟ್ಟುಕೊಂಡು ಆರೋಪಿ ಹಿಂದೂ ಸಂಘಟನೆ ವಿರುದ್ದ ಅವಹೇಳನಕಾರಿ ಬರಹಗಳನ್ನು ಹಾಕಿದ್ದ.
ಇದರ ವಿರುದ್ದ ಉಳ್ಳಾಲ ಪ್ರಖಂಡ ವಿಶ್ವಹಿಂದೂ ಪರಿಷತ್, ಬಜರಂಗದಳ ಪಾವೂರು, ಭಾರತ್ ಮಾತಾ ಶಾಖೆ ಕಾರ್ಯಕರ್ತರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಮುಚ್ಚಳಿಕೆ ಬರೆಸಿ ಎಚ್ಚರಿಸಿದ್ದಾರೆ.