ಮಂಗಳೂರು, ಅ.01(Daijiworld News/SS): ರಾಜ್ಯ 'ಸಮಸ್ತ ಹನೀಫೀ ಉಲಮಾ ಒಕ್ಕೂಟ' ನೂತನವಾಗಿ ಅಸ್ತಿತ್ವಕ್ಕೆ ಬಂದಿದ್ದು, ಇದರ ನೂತನ ಅಧ್ಯಕ್ಷರಾಗಿ ಕೆ.ಎಂ.ಎ.ಕೊಡುಂಗಾಯಿ ಫಾಝಿಲ್ ಹನೀಫಿ, ಪ್ರಧಾನ ಕಾರ್ಯದರ್ಶಿಯಾಗಿ ಶಂಸುದ್ದೀನ್ ಹನೀಫಿ ಮರ್ದಾಳ, ಕೋಶಾಧಿಕಾರಿಯಾಗಿ ಬಜ್ಪೆ ಶಾಂತಿಗುಡ್ಡೆ ಮಸೀದಿ ಖತೀಬ್ ಕೆ.ಇಬ್ರಾಹಿಂ ಫಾಝಿಲ್ ಹನೀಫಿ ಬುಡೋಳಿ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಶೈಖುನಾ ತ್ವಾಖಾ ಉಸ್ತಾದ್ ಈ ಒಕ್ಕೂಟದ ಗೌರವಾಧ್ಯಕ್ಷರು. ಇವರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಅಬ್ದುಲ್ ಲತೀಫ್ ಹನೀಫಿ ಕಳಂಜ, ಅಬ್ದುಲ್ ರಝಾಕ್ ಹನೀಫಿ ಕಕ್ಕಿಂಜೆ, ಇಸ್ಮಾಯಿಲ್ ಹನೀಫಿ ಸಜಿಪ, ಅಬ್ದುಲ್ ರಶೀದ್ ಹನೀಫಿ ಕಡಬ, ಮುಹಮ್ಮದ್ ಹನೀಫ್ ಹನೀಫಿ ಕೂಡುರಸ್ತೆ, ಸಂಘಟನಾ ಕಾರ್ಯದರ್ಶಿಯಾಗಿ ದಾವೂದ್ ಹನೀಫಿ ಉಡುಪಿ, ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ದಾವೂದ್ ಹನೀಫಿ ಅಡ್ಡೂರ್, ಅಬ್ದುಲ್ ಗಫೂರ್ ಹನೀಫಿ ವಿಟ್ಲ, ಫಾರೂಕ್ ಹನೀಫಿ ಕೃಷ್ಣಾಪುರ, ಫಾರೂಕ್ ಹನೀಫಿ ಅಮ್ಮೆಮ್ಮಾರ್, ಅಬ್ದುಲ್ ಹಮೀದ್ ಹನೀಫಿ ಆತೂರು ಆಯ್ಕೆಯಾದರು. ಒಟ್ಟು 40 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಸಭೆಯ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಖಾಝಿ ತ್ವಾಖಾ ಉಸ್ತಾದ್ ವಹಿಸಿದ್ದರು. "ಸಮಸ್ತ" ವಿದ್ಯಾಭ್ಯಾಸ ಬೋರ್ಡ್ ಸದಸ್ಯ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಮತ್ತು ದ.ಕ.ಜಿಲ್ಲಾ ಜಂಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಅಬ್ದುಲ್ ಲತೀಫ್ ದಾರಿಮಿ ಮೊದಲಾದವರು ಉಪಸ್ಥಿತರಿದ್ದರು.