ಮಂಗಳೂರು ಜ 2: ನಗರದ ವಾಟರ್ ಪಾರ್ಕ್ ನಲ್ಲಿ ಪಿಕ್ನಿಕ್ ಗೆ ಬಂದಿದ್ದ ಅನ್ಯಕೋಮಿನ ಎರಡು ಜೋಡಿಯೊಂದಕ್ಕೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಜ 2 ರ ಮಂಗಳವಾರ ಮದ್ಯಾಹ್ನ ನಡೆದಿದೆ. ಒಂದು ಕೋಮಿನ ಯುವಕರು ಮತ್ತೊಂದು ಕೋಮಿನ ಯುವತಿಯೊಂದಿಗೆ ವಾಟರ್ ಪಾರ್ಕ್ ಪಿಕ್ನಿಕ್ ಗೆಂದು ಬಂದಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹಿಂದೂ ಸಂಘಟನೆ ಕಾರ್ಯಕರ್ತರು ನೈತಿಕ ಪೋಲಿಸ್ ಗಿರಿ ನಡೆಸಿದ್ದಾರೆ. ಮಾಹಿತಿ ದೊರೆತ ಪೊಲೀಸರು ಸ್ಥಳಕ್ಕೆ ಹಲ್ಲೆ ಮಾಡುತ್ತಿರುವವರನ್ನು ಚದುರಿಸಿ ಯುವಕ ಯುವತಿಯರು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹಿಂದೂ ಕಾರ್ಯಕರ್ತರು ಪೊಲೀಸರ ಸಮ್ಮುಖದಲ್ಲಿ ಥಳಿತ ನಡೆಸಿದ್ದು ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಈ ಯುವಕ ಯುವತಿಯರು ಐಕಳ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.