ಬಂಟ್ವಾಳ, ಅ 01 (DaijiworldNews/SM): ಕುಕ್ಕೆ ಸುಬ್ರಹ್ಮಣ್ಯಕ್ಕೆ ಉದ್ಯಮಿ ಮುತ್ತಪ್ಪ ರೈ ದೇರ್ಲ ಮತ್ತು ಅಜಿತ್ ಶೆಟ್ಟಿ ಕಡಬ ಕೊಡುಗೆಯಾಗಿ ನೀಡುತ್ತಿರುವ ಬ್ರಹ್ಮರಥದ ಕೆಲಸ ಕಾರ್ಯ ಪೂರ್ಣಗೊಂಡಿದ್ದು, ಕೋಟೇಶ್ವರದಿಂದ ರಥವನ್ನು ಶ್ರೀ ಕ್ಷೇತ್ರ ಕುಕ್ಕೆಗೆ ರವಾನಿಸಲಾಗುತ್ತಿದೆ. ಇದು ಇಂದು ಬಂಟ್ವಾಳ ತಲುಪಿದ ಸಂದರ್ಭ ಮಾಜಿ ಸಚಿವರು ಸೇರಿದಂತೆ ಭಕ್ತರು ಸ್ವಾಗತಿಸಿದರು.
ಮಂಗಳಾವಾರದಂದು ಮಂಗಳೂರಿನಿಂದ ರಥವನ್ನು ಸುಬ್ರಹ್ಮಣ್ಯದತ್ತ ಸಾಗಾಟ ಮಾಡಲಾಯಿತು. ರಥ ರವಾನೆಗೆ ಕದ್ರಿಯಿಂದ ಚಾಲನೆ ನೀಡಲಾಯಿತು. ಮಧ್ಯಾಹ್ನದ ವೇಳೆಗೆ ಬ್ರಹ್ಮ ರಥ ಬಿ.ಸಿ.ರೋಡಿಗೆ ತಲುಪಿದ ಸಂದರ್ಭದಲ್ಲಿ ಮಾಜಿ ಸಚಿವ ರಮಾನಾಥ ರೈಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ವ್ಯಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ, ಕೃಷ್ಣ ಮೂರ್ತಿ ಭಟ್. ಮಹೇಶ್ ಕರಿಕಲ, ಬಾಲಕೃಷ್ಣ ಬಲ್ಲೇರಿ, ದಾನಿಗಳಾದ ಅಜೀತ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.