ವಿಟ್ಲ, ಅ 2 (Daijiworld News/RD): ಇಲ್ಲಿನ ಠಾಣಾ ವ್ಯಾಪ್ತಿಯ ಕುದ್ದುಪದವು ಎಂಬಲ್ಲಿರುವ ಪೆಟ್ರೋಲ್ ಬಂಕ್ ನ ಲಾಕರ್ ನ್ನು ರಾತ್ರೋರಾತ್ರಿ ಖದೀಮರು ದರೋಡೆಗೈದಿದ್ದಾರೆ. ಲಾಕರ್ ನಲ್ಲಿದ್ದ ಲಕ್ಷಾಂತರ ರೂಪಾಯಿಗಳನ್ನು ದೋಚಿದ್ದಾರೆ ಎನ್ನಲಾಗಿದೆ. ಇನ್ನು ಕಾಶಿಮಠ ಎಂಬಲ್ಲಿ ರಸ್ತೆ ಪಕ್ಕದಲ್ಲಿ ನಿಲ್ಲಿಸಲಾಗಿದ್ದು, ಗೂಡ್ಸ್ ಆಪೆಯನ್ನು ಕೂಡ ಕಳವು ಮಾಡಲಾಗಿದೆ. ಇದೀಗ ಒಂದೇ ತಂಡ ಈ ಕೃತ್ಯಗಳನ್ನು ನಡೆಸಿದೆ ಎನ್ನಲಾಗಿದೆ.
ಕಾಶಿಮಠದಲ್ಲಿದ್ದ ಗೂಡ್ಸ್ ಆಪೆಯ ಮೂಲಕವೇ ಲಾಕರ್ ನ್ನು ಸಾಗಾಟ ಮಾಡಿರಬಹುದೆಂದು ಶಂಕಿಸಲಾಗಿದೆ. ಸ್ಥಳಕ್ಕೆ ವಿಟ್ಲ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ವಿಟ್ಲ-ಕಾಸರಗೋಡು ರಸ್ತೆಯ ಕುದ್ದುಪದವು ಎಂಬಲ್ಲಿ ಇತ್ತೀಚೆಗಷ್ಟೇ ನೂತನವಾಗಿ ಪೆಟ್ರೋಲ್ ಪಂಪ್ ಆರಂಭಿಸಲಾಗಿತ್ತು, ಉತ್ತಮ ವಹಿವಾಟು ಹೊಂದಿತ್ತು.