ಲಂಡನ್ ಜ 2: ಬ್ರಿಟನ್ ದೇಶದ ಲಿವರ್ಪೂಲ್ ನಗರದಲ್ಲಿ ಬಹುಮಹಡಿ ಪಾರ್ಕಿಂಗ್ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಪರಿಣಾಮ ಸಾವಿರ ನಾಲ್ಕುನೂರಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿದೆ. ಪ್ರಸಿದ್ದ
ಲಿವರ್ಪೂಲ್ ನಗರದಲ್ಲಿ ಅಂತಾರಾಷ್ಟ್ರೀಯ ಕುದುರೆ ಪ್ರದರ್ಶನ ನಡೆಯುತ್ತಿತ್ತು. ಪ್ರದರ್ಶನಕ್ಕೆ ಹಲವಾರು ಜನ ಆಗಮಿಸಿದ್ದು, ಪ್ರದರ್ಶನ ನಡೆಯುತ್ತಿರುವ ಸಮೀಪವೇ ಪಾರ್ಕಿಂಗ್ ಕಟ್ಟಡದಲ್ಲಿ ಕಾರುಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಈ ವೇಳೆ ಕಾರೊಂದರ ಇಂಜಿನ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಅಲ್ಲದೆ ಈ ಬೆಂಕಿ ಕಿಡಿ ಕಾರಿನಿಂದ ಕಾರಿಗೆ ಹರಡಿ ಇಡೀ ಕಟ್ಟಡಕ್ಕೆ ಆವರಿಸಿಕೊಂಡಿದೆ. ಅನೇಕ ಕಾರುಗಳ ಸ್ಫೋಟದಿಂದ ಸ್ಥಳೀಯರು ಭಯ ಭೀತಗೊಂಡಿದ್ದು, ಘಟನೆಯಲ್ಲಿ ಸುಮಾರು 1400ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮಗೊಂಡಿವೆ. ಇನ್ನು ಡಿ ೩೧ ರ ಭಾನುವಾರ ರಾತ್ರಿ ಹೊತ್ತುಕೊಂಡಿದ್ದ ಅಗ್ನಿ ಜ್ವಾಲೆ ಜ ೧ರ ಸೋಮವಾರದವರೆಗೂ ಹೊತ್ತಿ ಉರಿಯುತ್ತಿತ್ತು. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸವೇ ಪಟ್ಟಿದ್ದಾರೆ. ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ಪೊಲೀಸ್ ಇಲಾಖೆ ತಿಳಿಸಿದೆ.