ಮಂಗಳೂರು ಜ 2 : ನಗರದ ಪಿಲಿಕುಳದ ವಾಟರ್ ಪಾರ್ಕ್ ನಲ್ಲಿ ಎಂಜಾಯ್ ಮಾಡುತ್ತಿದ್ದ ವಿದ್ಯಾರ್ಥಿಗಳ ತಂಡಕ್ಕೆ ಹಿಂದೂ ಸಂಘಟನೆಯೊಂದರ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ಜ 2 ರ ಮಂಗಳವಾರ ಮದ್ಯಾಹ್ನ ನಡೆದಿದ್ದು ಇದೀಗ ಈ ಪ್ರಕರಣ ರೋಚಕ ತಿರುವು ಪಡೆದುಕೊಂಡಿದೆ. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ವಿದ್ಯಾರ್ಥಿನಿಯರು ಹೆತ್ತವರು ನೈತಿಕ ಪೊಲೀಸ್ ಗಿರಿಯ ನಡೆಸಿದ ವ್ಯಕ್ತಿಗಳ ವಿರುದ್ದ ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪರಿಣಾಮ ಮೂಡುಶೆಡ್ಡೆಯ ನಿವಾಸಿಯಾದ ಸಂಪತ್ ಶೆಟ್ಟಿಯನ್ನು ಜನವರಿ 2 ರಂದು ಪೊಲೀಸರು ಬಂಧಿಸಿದ್ದು ಘಟನೆಯಲ್ಲಿ ಭಾಗಿಯಾದ ಇತರರ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ವಿಭಿನ್ನ ಕೋಮಿನ ಈ ವಿದ್ಯಾರ್ಥಿಗಳು ಐಕಳದ ಪೊಂಪೈ ಕಾಲೇಜಿನ ವಿದ್ಯಾರ್ಥಿಗಳಾಗಿದ್ದಾರೆ.