ಕಾವೂರು, ಅ 3 (Daijiworld News/RD): ಅಕ್ಟೋಬರ್ 2 ಗಾಂಧೀ ಜಯಂತಿ ಪ್ರಯುಕ್ತ ರಾಬಿನ್ ಹುಡ್ ಆರ್ಮಿ ಸಂಘಟನೆಯು ’ಬೊನ್ ಅಪೆಟಿಟ್- ಎ ಮೀಲ್ ಟೂ ಹೀಲ್’ ಎಂಬ ಕಾರ್ಯಕ್ರಮವನ್ನು ಕಾವೂರು ವಿದ್ಯಾ ಜ್ಯೋತಿ ಶಾಲೆಯಲ್ಲಿ ಹಮ್ಮಿಕೊಂಡಿತ್ತು.
ಈ ಸಂಭರ್ದದಲ್ಲಿ ಅಲ್ಲಿನ ನೆರೆದ ವಿದ್ಯಾರ್ಥಿನಿಯರಿಗೆ ಮತ್ತು ಮಹಿಳೆಯರಿಗೆ ಋತುಸ್ರಾವ ಮತ್ತು ಆರೋಗ್ಯದ ಕಾಳಜಿಯ ಬಗ್ಗೆ ಅರಿವು ಮೂಡಿಸಿದರು. ಸುಮಾರು 50 ಜನ ಸಂಘಟನೆಯಲ್ಲಿ ಸ್ವಯಂಸೇವಕರಿದ್ದು. ಈ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ನ್ಯಾಪ್ಕಿನ್ ಅನ್ನು ವಿತರಿಸಿದರು.
ರಾಬಿನ್ ಹುಡ್ ಆರ್ಮಿ ಸಂಘಟನೆಯಲ್ಲಿ ಮಣಿಪಾಲ್ ವಿಶ್ವವಿದ್ಯಾಲಯ ಮತ್ತು ಎನ್ಐಟಿಕೆ ಸುರತ್ಕಲ್ ವಿದ್ಯಾರ್ಥಿಗಳು ಸೇರಿದಂತೆ 300 ಸ್ವಯಂಸೇವಕರನ್ನು ಒಳಗೊಂಡಿದೆ.
ರಾಬಿನ್ ಹುಡ್ ಆರ್ಮಿ ಎನ್ಜಿಒ ಆಗಿದ್ದು, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಜನರ ಕಷ್ಟಕ್ಕೆ ನೆರವಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಜನರ ಎದುರಿಸುವ ಸಮಸ್ಯೆಗಳನ್ನು ಪರಿಹರಿಸುವ ಸಣ್ಣ ಪ್ರಯತ್ನ ಈ ಒಂದು ಸಂಘಟನೆ ಮೂಲಕ ಆಗುತ್ತಿದೆ.