ಮಂಗಳೂರು, ಜ 3: ಲವ್ ಜಿಹಾದ್ ವಿರುದ್ದ ಹಿಂದೂ ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಹಿಂಪ, ಬಜರಂಗ ದಳ ಮತ್ತು ದುರ್ಗಾ ವಾಹಿನಿ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಬೃಹತ್ ಜನಜಾಗೃತಿ ಅಭಿಯಾನಕ್ಕೆ ಜ 3 ರ ಬುಧವಾರ ಬೆಳಗ್ಗೆ ಪಿವಿಎಸ್ ಜಂಕ್ಷನ್ ಬಳಿ ಇರುವ ಶ್ರೀ ಲಕ್ಷ್ಮೀ ನಾರಾಯಣ ದೇವಸ್ಥಾನದಲ್ಲಿ ಚಾಲನೆ ದೊರಕಿತು.
ಮುಂದಿನ 15 ದಿನಗಳ ಕಾಲ ನಡೆಯಲಿರುವ ಬೃಹತ್ ಜಾಗೃತಿ ಕಾರ್ಯಕ್ರಮದಲ್ಲಿ ಇಂದು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಉದ್ಯೋಗಿ ಯುವತಿಯರಿಗೆ ಮತ್ತು ಮನೆ ಮನೆಗೆ ತೆರಳಿ ಕರ ಪತ್ರ ಹಂಚುವ ಮೂಲಕ ಪ್ರಾರಂಭವಾಯಿತು.
ದಕ್ಷಿಣ ಕನ್ನಡ, ಕಾಸರಗೋಡು , ಉಡುಪಿ ಭಾಗದ ಹಿಂದೂ ಯುವತಿಯರು ಬಲಿಯಾಗುತ್ತಿದ್ದು, ಪ್ರೀತಿ ಪ್ರೇಮದ ಆಮೀಷಕ್ಕೆ ಒಳಗಾಗಿ ಹಲವಾರು ಹೆಣ್ಮಕ್ಕಳು ಇಸ್ಲಾಂಗೆ ಮತಾಂತರವಾಗುತ್ತಿದ್ದು ಇದೊಂದು ವ್ಯವಸ್ಥಿತ ಹುನ್ನಾರವಾಗಿದೆ ಈ ಹಿನ್ನಲೆಯಲ್ಲಿ ಮೂರು ಸಂಘಟನೆಗಳ ಘಟಕ ಮುಖಾಂತರ ವಾರ್ಡ್ ಮತ್ತು ಗ್ರಾಮ ಸಭೆಗಳನ್ನು ಜಾತಿ ಸಂಘಟನೆಗಳ ಮುಖಾಂತರ ಸಭೆ ಕರೆದು ಲವ್ ಹಿಹಾದ್ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಿಹಿಂಪ ಕಾರ್ಯಧ್ಯಕ್ಷ ಎಂ.ಬಿ ಪುರಾಣಿಕ್ ಹೇಳಿದರು. ಬೃಹತ್ ಜನಜಾಗೃತಿ ಕಾರ್ಯಕ್ರಮದಲ್ಲಿ ಬಜರಂಗದಳ ಮುಖಂಡ ಶರಣ್ ಪಂಪ್ ವೆಲ್ , ವಿ.ಹಿ.ಪ ನ ಗೋಪಾಲ್ ಕುತ್ತಾರ್ , ಭುಜಂಗ ಕುಲಾಲ್ , ದುರ್ಗಾವಾಹಿನಿ ಸಂಚಾಲಕಿ ಸುರೇಖಾ ರಾಜ್ ಮುಂತಾದವರು ಉಪಸ್ಥಿತರಿದ್ದರು.