ಮಂಗಳೂರು ಜ 3: ಅನ್ಯಕೋಮಿನ ಯುವಕ ಯುವತಿಯರು ಜೊತೆಗಾಗಿ ಓಡಾಡುವುದನ್ನು ಕಂಡರೆ ನೈತಿಕ ಪೊಲೀಸರು ಬೆದರಿಕೆ ಹಾಗೂ ಧರ್ಮದೇಟು ಹಾಕುತ್ತಿರುವ ಪ್ರಸಂಗ ನಗರದಲ್ಲಿ ಹೆಚ್ಚಾಗಿ ಸುದ್ದಿಯಾಗುತ್ತಿರುವುದು ಒಂದೆಡೆಯಾದರೆ ಇದೀಗ ನೈತಿಕ ಪೊಲೀಸರ ಬೆದರಿಕೆ ತಂತ್ರದ ಇನ್ನೊಂದು ಮುಖ ಬಹಿರಂಗವಾಗಿದೆ.ವೀರ ಕೇಸರಿ ಎಂಬ ಫೇಸ್ ಬುಕ್ ಪೇಜ್ ನಲ್ಲಿ ನೈತಿಕ ಪೊಲೀಸರು ಮಂಗಳೂರಿನ ಹೊರವಲಯದ ಮೂಡಬಿದಿರೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದು ಬುದ್ದಿ ಹೇಳಿ ಎಚ್ಚರಿಕೆ ನೀಡಿದ್ದಾಯಿತು. ಇನ್ನು ಮುಂದುವರಿದರೆ ಧರ್ಮದೇಟು ಗ್ಯಾರಂಟಿ ಎಂದು ಎಂದು ಬೆದರಿಕೆ ಹಾಕಿದ್ದಾರೆ. ಅಲ್ಲದೆ ಅನ್ಯ ಧರ್ಮದ ಯುವಕರೊಂದಿಗೆ ಕಂಡು ಬಂದಲ್ಲಿ ಧರ್ಮದೇಟು ನೀಡ್ತಿವಿ ಎಂದು ನೈತಿಕ ಪೊಲೀಸರು ಫೇಸ್ ಬುಕ್ ಪೇಜ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ. ಜ 2 ರ ಮಂಗಳವಾರ ತಾನೆ ಪಿಲಿಕುಳದ ವಾಟರ್ ಪಾರ್ಕ್ ನಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿತ್ತು. ಭಿನ್ನ ಕೋಮಿನ ಕಾಲೇಜು ವಿದ್ಯಾರ್ಥಿಗಳು ಜೊತೆಗೆ ಕಾಣಿಸಿಕೊಂಡಿದ್ದಕ್ಕಾಗಿ ನೈತಿಕ ಪೊಲೀಸರು ಹಲ್ಲೆ ನಡೆಸಿದ್ದರು. ಇದೀಗ ಇದರ ಬೆನ್ನಲ್ಲೇ ಫೇಸ್ ಬುಕ್ ನಲ್ಲಿ ಕಿಡಿಗೇಡಿಗಳು ಈ ರೀತಿಯಲ್ಲಿ ವಿದ್ಯಾರ್ಥಿನಿಯರಿಗೆ ಬೆದರಿಕೆ ಹಾಕಿದ್ದಾರೆ.