ಪುತ್ತೂರು, ಅ 04 (Daijiworld News/MSP): ಜಮೀನಿನ ಪೋಡಿ ಮಾಡಿಕೊಡಲು 20 ಸಾವಿರ ರೂ. ಲಂಚ ಪಡೆದ ಆರೋಪದಲ್ಲಿ ತಾಲೂಕಿನ ಸರ್ವೇಯರ್ ಎಮ್. ಶಿವಕುಮಾರ್ ಎಂಬುವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಪೊಲೀಸರು ಬಂಧಿಸಿದ್ದಾರೆ.
ಹಿರೇಬಂಡಾಡಿ ಗ್ರಾಮದ ನಿವಾಸಿ ಕೂಲಿ ಕಾರ್ಮಿಕರಾಗಿದ್ದ ಗೋಪಾಲ್ ಮುಗೇರ್ ಎಂಬವರು ತಮ್ಮ ಜಂಟಿ ಹಕ್ಕಿನ ಜಮೀನಿನ ಪೋಡಿ ಮಾಡಿಸಿಕೊಳ್ಳಲು ನಾಲ್ಕು ವರ್ಷದ ಹಿಂದೆ ಅಂದರೆ 2015 ರ ಜನವರಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಪೋಡಿ ಮಾಡಿಕೊಡಲು ಸರ್ವೇಯರ್ ಎಮ್. ಶಿವಕುಮಾರ್ ಅವರು 30,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ನಾಲ್ಕು ಹಂತದಲ್ಲಿ 20,000 ಸಾವಿರ ಪಾವತಿಸಿದ್ದರೂ ಮತ್ತೆ ಲಂಚಕ್ಕಾಗಿ ಕೂಲಿ ಕಾರ್ಮಿಕನನ್ನು ಪೀಡಿಸಿದ್ದ.
ಈ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಎಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.