ಮಂಗಳೂರು ಜ 1 : ದ.ಕ ಜಿಲ್ಲೆಯ ಪ್ರಸಿದ್ದ ತೀರ್ಥ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿ.20 ರಂದು ತಮಿಳು ಚಿತ್ರ ನಟಿ ನಟನನ್ನು ಬಂಧಿಸಿ ಇವರಿಬ್ಬರ ಮೇಲೆ ಸುಳ್ಳು ಆರೋಪ ಹೊರಿಸಿ ಸುಬ್ರಹ್ಮಣ್ಯ ಪೊಲೀಸರು ದೈಹಿಕ ಮತ್ತು ಮಾನಸಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಆರೋಪ ಹಿನ್ನಲೆಯಲ್ಲಿ ಠಾಣೆಯ ಇಬ್ಬರು ಪೊಲೀಸರನ್ನು ಜಿಲ್ಲಾ ಎಸ್ಪಿ ಸುಧೀರ್ ಶೆಟ್ಟಿ ಅಮಾನತುಗೊಳಿಸಿದ್ದಾರೆ.
ದೇವಾಲಯಕ್ಕೆ ಸರ್ಪ ಸಂಸ್ಕಾರಕ್ಕೆ ಬಂದಿದ್ದ ತಮಿಳು ಚಿತ್ರ ನಟಿ ಉಳಿದುಕೊಂಡಿದ್ದ ಕೊಠಡಿಗೆ ಸಹ ನಟ ಸುಳ್ಯ ಬೆಳ್ಳಾರೆ ಪರ್ವೇಜ್ ಬಂದು ಹೋದ ಕಾರಣಕ್ಕೆ ಸುಬ್ರಹ್ಮಣ್ಯ ಠಾಣೆಗೆ ಮಾಹಿತಿ ಹೋಗಿ ಸುಬ್ರಹ್ಮಣ್ಯ ಠಾಣಗೆ ನಟಿಯನ್ನು ಕರೆದುಕೊಂಡು ಹೋಗಿ ಆಕೆಯ ಪೋನ್ನಿಂದ ಪರ್ವೆಜ್ಗೆ ಪೋನ್ ಮಾಡಿ ಮರು ದಿನ ಆತನು ಸುಬ್ರಹ್ಮಣ್ಯ ಠಾಣೆಗ ಬರುವಂತೆ ಮಾಡಿದ್ದರು.ಈ ಸಂದರ್ಭದಲ್ಲಿ ಅವರಿಬ್ಬರಿಗೆ ಪೊಲೀಸರು ಹೊಡೆದಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣದಲ್ಲಿ ತನ್ನ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಕಾರಣಕ್ಕಾಗಿ ಆಕೆ ತನ್ನ ಮೊಬೈಲಿನಲ್ಲಿ ಸೆಲ್ಪಿ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಿಕರಣ ನೀಡಿದ್ದಳು. ಇದು ಜಿಲ್ಲಾ ಎಸ್ಪಿ ಸುದೀರ್ ರೆಡ್ಡಿಗೆ ತಲುಪಿ ಹಲ್ಲೆ ನಡೆಸಿದ ಸುಬ್ರಹ್ಮಣ್ಯ ಠಾಣೆಯ ಪೇದಗಳಾದ ಸಂದ್ಯಾ ಹಾಗೂ ಪ್ರಶಾಂತ್ ಎಂಬವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.