ಕಾರ್ಕಳ, ಅ 05 (Daijiworld News/MSP): ಇಲ್ಲಿನ ಈದು ನೂರಾಲ್ಬೆಟ್ಟು ಪರಿಸರದಲ್ಲಿ ಜಾನುವಾರನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣಾಧಿಕಾರಿ ನಕೀರ್ ಹುಸೈನ್ ಬಂಧಿಸಿದ್ದಾರೆ.
ಬಂಧಿತರನ್ನು ಈದು ಕರಿಂಬ್ಯಾಲು ತೌಸಿಫ್(26), ಈದು ಕರಿಂಬ್ಯಾಲು ನವಾಜು(24), ಈದು ಕರಿಂಬ್ಯಾಲು ಮೈಯದೀ(26) ಬಂಧಿತರು.
ಈ ಆರೋಪಿಗಳು ನೂರಾಳ್ ಬೆಟ್ಟು ಎಂಬಲ್ಲಿ ರಸ್ತೆಯ ಮೇಲೆ ಮೇಯಲು ಬಿಟ್ಟಿದ್ದ ದನವನ್ನು ಕಳ್ಳತನ ಮಾಡಿ ಪರವಾನಿಗೆ ಇಲ್ಲದ ಕೆಎ 19-ಎಎ-5938 ನೇ ನಂಬರ್ ಪಿಕ್ ಅಪ್ ವಾಹನದಲ್ಲಿ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಿದ್ದರು.
ನೂರಾಳ್ ಬೆಟ್ಟು ಗ್ರಾಮದ ನೂರಾಳ್ ಬೆಟ್ಟು ಶಾಲೆಯ ಬಳಿ ಸಾರ್ವಜನಿಕರು ತಡೆದು ನಿಲ್ಲಿಸಿ ಪೊಲೀಸರಿಗೆ ಮಾಹಿತಿ ರವಾಯಿಸಿದ್ದರು. ಆರೋಪಿತರು ತಮ್ಮ ಸ್ವಂತಲಾಭಕ್ಕೋಸ್ಕರ ಜಾನುವಾರನ್ನು ವಧಿಸಿ ಮಾಂಸ ಮಾಡಿ ಮಾರಾಟ ಮಾಡುವ ಸಮಾನ ದುರುದ್ದೇಶವೊಂದನ್ನು ಹೊಂದಿದ್ದರು. ಅದರಂತೆ ಕಾರ್ಯಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಕೃತ್ಯಕ್ಕೆ ಬಳಸಲಾದ ಕಾರು, ಹುರಿಹಗ್ಗ ಹಾಗೂ ಕಳವುಗೈಯಲಾಗಿದ್ದ ಜಾನುವಾರನ್ನು ವಶಪಡಿಸಿದ್ದಾರೆ.