ಮೂಡುಬಿದಿರೆ, ಅ 05(Daijiworld News/MSP): ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಸಾಧನೆ ಎಂದು ಹೇಳಿಕೊಳ್ಳಲು ಯಾವುದೇ ಜನರಪರ ಕಾರ್ಯಕ್ರಮವಿಲ್ಲ. ನೆರೆ ಪ್ರವಾಹ ಕೊಡುವಲ್ಲಿ ಕೂಡ ರಾಜ್ಯ ಕೇಂದ್ರ ಸರ್ಕಾರ ವಿಫಲವಾಗಿದೆ. 2020ರಲ್ಲಿ ಸರ್ಕಾರ ಪತನಗೊಂಡು ಮತ್ತೆ ಚುನಾವಣೆ ನಡೆಯಲಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಮೂಡುಗೆರೆ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಕ್ಕಾಗಿ ಶನಿವಾರ ತೆರಳಿದ್ದು, ಈ ಮೊದಲು ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಅವರ ಮನೆಗೆ ಭೇಟಿ ನೀಡಿದ ಸಂದರ್ಭ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ರಾಜ್ಯವು ಹಿಂದೆಂದೂ ಕಂಡರಿಯದ ರೀತಿಯಲ್ಲಿ ನೆರೆ ಪೀಡಿತವಾಗಿದೆ. ಎರಡುವರೆ ಲಕ್ಷ ಮನೆಗಳು ಹಾನಿಗೊಳಗಾಗಿದ್ದು, ಸುಮಾರು ಒಂದು ಲಕ್ಷ ಕೋಟಿ ರೂಪಾಯಿಗಳಿಗೂ ಅಧಿಕ ನಷ್ಟವಾಗಿದೆ. ಆದರೆ ಸರ್ಕಾರ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡದರೆ ಕಡಿಮೆ ಪರಿಹಾರ ಸರ್ಕಾರ ನೀಡಿದೆ. ಸರ್ಕಾರ ಅದೂ ಎರಡೂ ತಿಂಗಳ ನಂತರ.ಕೇಂದ್ರ ಸರ್ಕಾರದಿಂದ ೫ ಸಾವಿರ ಕೋಟಿ ಎಂದು ನಾವು ಒತ್ತಾಯಿಸಿದ್ದೆವು. ಆದರೆ ೧೨೦೦ ಕೋಟಿ ರೂಪಾಯಿ ಕೊಟ್ಟಿದ್ದೇವೆ ಅದೂ ತಡವಾಗಿದೆ. ಇನ್ನು ಹೆಚ್ಚು ಕೊಡುತ್ತಾರೆ ಎಂಬ ನಂಬಿಕೆ ಇದೆ. ಯಡಿಯೂರಪ್ಪನವರು ಖಜಾನೆ ಖಾಲಿಯಾಗಿದೆ ಎಂದು ಪೆದ್ದು ಪೆದ್ದು ಉತ್ತರ ನೀಡಿದ್ದಾರೆ. ಖಜಾನೆ ಖಾಲಿಯಾಗಿದೆ ಅಂದ್ರೆ ಏನು?. ಪ್ರತಿ ತಿಂಗಳು ತೆರಿಗೆ ಬರುತ್ತಾ ಇರುತ್ತದೆ. ಪ್ರತಿ ತಿಂಗಳು ತೆರಿಗೆ ಸೂಕ್ತ ರೀತಿಯಲ್ಲಿ ಸಂಗ್ರಹ ಮಾಡದಿದ್ದಾರೆ ಸಮಸ್ಯೆ ಬರಲ್ಲ. ನಾನು ಮುಖ್ಯಮಂತ್ರಿ ಆಗಿದ್ದ ಐದು ವರ್ಷ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ ಎಂದರು.
ತಂತಿ ಮೇಲೆ ನಡೆಯುವಂತೆ ಪರಿಸ್ಥಿತಿ ಇದ್ರೆ, ಯಡಿಯೂರಪ್ಪನವರೇ ನಡೆಯಬೇಡಿ. ವಯಸ್ಸಾಗಿದೆ ಜಾರಿ ಬೀಳುತ್ತೀರಿ ಎಂದು ಹೇಳಿದರು.
ಮಾಜಿ ಸಚಿವರಾದ ಬಿ.ರಮಾನಾಥ ರೈ, ಯು.ಟಿ ಖಾದರ್, ಅಭಯಚಂದ್ರ ಜೈನ್, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜ, ದ.ಕ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಶೆಟ್ಟಿ ಉಪಸ್ಥಿತರಿದ್ದರು