ಮಂಗಳೂರು, ಅ 5 (Daijiworld News/RD): ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಗ್ನಿ ಅವಘಡದಂತಹ ಅನಾಹುತಗಳನ್ನು ಕ್ಷಿಪ್ರಗತಿಯಲ್ಲಿ ನಂದಿಸಲು ವಿದೇಶದಿಂದ ವಾಹನವೊಂದು ಆಗಮಿಸಿದೆ.
ದುಬಾೖ ಮೂಲದ ಈ ಹೊಸ ವಾಹನ. ಇದು ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಬಳಕೆಯಲ್ಲಿರುವಂಥದ್ದು. ಇಲ್ಲಿನ ಅಗ್ನಿಶಾಮಕ ದಳದ ತಜ್ಞರು ಇದರ ಬಗ್ಗೆ ತರಬೇತಿ ಪಡೆದಿದ್ದಾರೆ.
ಘಟನಾ ಸ್ಥಳಕ್ಕೆ ಅತ್ಯಂತ ವೇಗವಾಗಿ ತೆರಳಬಲ್ಲ ಅತ್ಯಾಧುನಿಕ ವಾಹನವಿದು. 25 ಸೆಕೆಂಡ್ ಒಳಗೆ ತಾಸಿಗೆ 80 ಕಿ.ಮೀ. ವೇಗ ಪಡೆಯಬಲ್ಲುದು. ಏರ್ಪೋರ್ಟ್ನಲ್ಲಿ ಅಗ್ನಿಅವಘಡಗಳಾದರೆ ಅರೆಕ್ಷಣದಲ್ಲಿಯೇ ತಲುಪಲು ಸಾಧ್ಯ. ಸುಮಾರು 6 ಸಾವಿರ ಲೀ. ನೀರು ಮತ್ತು 800 ಲೀ.ನಷ್ಟು ಅಗ್ನಿ ಶಮನಕಾರಿ ನೊರೆಯನ್ನು ಇದು ಹೊಂದಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಮರದ ಕೊಂಬೆಯಂಥ ಅಡೆತಡೆಗಳನ್ನು ಕತ್ತರಿಸಿ ನಿವಾರಿಸಲು ಬೇಕಾದಂಥ ಆಧುನಿಕ ತಾಂತ್ರಿಕ ಸಲಕರಣೆಗಳು ಇದರಲ್ಲಿವೆ. ಕೆಮರಾ, ಹೈಮಾಸ್ಕ್ ಲ್ಯಾಂಪ್ ಇದರಲ್ಲಿದ್ದು, ಎಲ್ಲವೂ ಕಂಪ್ಯೂಟರೀಕೃತವಾಗಿ ಕೆಲಸ ಮಾಡುತ್ತವೆ. 5 ಮಂದಿ ಕುಳಿತುಕೊಳ್ಳಲು ಅವಕಾಶವಿದೆ. ಈಗಾಗಲೇ 5 ಅಗ್ನಿಶಾಮಕ ವಾಹನಗಳಿವೆ.