ಉಡುಪಿ, ಅ.05(Daijiworld News/SS): ಕೊನೆಗೂ ಅದಮಾರು ಮಠದ ಪರ್ಯಾಯ ಪೀಠವನ್ನು ಯಾರು ಏರುತ್ತಾರೆ ಎನ್ನುವ ಕುತೂಹಲಕ್ಕೆ ಇಂದು ತೆರೆ ಬಿದ್ದಂತಾಗಿದೆ.
ಇಂದು ಪಿಪಿಸಿ ಮಿನಿ ಹಾಲ್'ನಲ್ಲಿ ನಡೆದ ಪರ್ಯಾಯ ಪೂರ್ವ ಸಮಾಲೋಚನೆಯಲ್ಲಿ ಮಾತನಾಡಿದ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ. ತನ್ನ ಗುರುಗಳಾದ ಶ್ರೀ ವಿಬುದೇಶ ತೀರ್ಥ ಸ್ವಾಮಿಜಿಯವರು ತನ್ನನ್ನು 2004-2006ಕ್ಕೆ ಪರ್ಯಾಯ ಪೀಠಾರೋಹಣ ಮಾಡಲು ಅವಕಾಶ ಕಲ್ಪಿಸಿದ್ದರು. ತಮ್ಮ ಉತ್ತರಾಧಿಕಾರಿಯಾದ ಈಶಪ್ರಿಯ ತೀರ್ಥ ಸ್ವಾಮಿಯವರಿಂದ ಕೃಷ್ಣನ ಸೇವೆ ಮಾಡಿಸುತ್ತೇನೆ ಎನ್ನುವ ಮೂಲಕ ಅನೇಕರ ಕುತೂಹಲಕ್ಕೆ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಬ್ರೇಕ್ ಹಾಕಿದ್ದಾರೆ.
ಈ ಬಾರಿಯೂ ಕೂಡ ನಾನು ನನ್ನ ಮಗನಂತೆಯೇ ಇರುವ ಜ್ಞಾನವಂತ ಹಾಗೂ ದೇವರ ಪೂಜೆಗೆ ಅರ್ಹನಾದ ಕಿರಿಯ ಸ್ವಾಮಿಗಳಿಂದ ಕೃಷ್ಣನ ಸೇವೆ ಮಾಡಿಸುತ್ತೇನೆ ಎಂದರು.