ಮೂಲ್ಕಿ, ಅ 6 (Daijiworld News/RD):ಇಲ್ಲಿನ ಸಮೀಪದ ಕೊಳ್ನಾಡಿನಲ್ಲಿ ಲಾರಿಗಳೆರಡು ಢಿಕ್ಕಿ ಹೊಡೆದು ಓರ್ವ ಚಾಲಕ ಗಂಭೀರ ವಾಗಿ ಗಾಯಗೊಂಡಿರುವ ಘಟನೆ ಅ.5ರ ಶನಿವಾರ ರಾತ್ರಿ ಸಂಭವಿಸಿದೆ.
ಕೊಳ್ನಾಡಿನ ಪೆಟ್ರೋಲ್ ಪಂಪ್ನಲ್ಲಿ ಇಂಧನ ತುಂಬಿಸಿ ಉಡುಪಿ ಕಡೆಗೆ ಬರಲೆಂದು ಹೆದ್ದಾರಿ ದಾಟುತ್ತಿದ್ದ ಲಾರಿಗೆ ಮಂಗಳೂರು ಕಡೆಯಿಂದ ಬಂದ ಲಾರಿಯು ಢಿಕ್ಕಿ ಹೊಡೆ ದಿದೆ. ಪರಿಣಾಮ ಢಿಕ್ಕಿ ಹೊಡೆದ ಲಾರಿಯ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಆತನ ಕಾಲುಗಳಿಗೆ ಏಟಾಗಿದ್ದು, ಲಾರಿಯಲ್ಲಿ ಸಿಲುಕಿಕೊಂಡಿದ್ದ ಅವರನ್ನು ಸ್ಥಳೀಯರು ರಕ್ಷಿಸಿದರು.
ಲಾರಿಗಳು ಒಂದಕ್ಕೊಂದು ಸಿಲುಕಿಕೊಂಡಿದ್ದು, ಕ್ರೇನ್ ಬಳಸಿ ಬೇರ್ಪಡಿಸಲಾಯಿತು. ಪೊಲೀಸರು ಹಾಗೂ ಸ್ಥಳೀಯರು ಗಾಯಾಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಸಮೀಪದ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.